ಎರ್ನಾಕುಳಂ: ತನ್ನ ಧರ್ಮೇತರ ಪತಿ ತನ್ನನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸುತ್ತಿದ್ದಾನೆ ಎಂದು ಕ್ರೈಸ್ತ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಘಟನೆಯ ಕುರಿತು ಗುಪ್ತಚರ ಸಂಸ್ಥೆಗಳು ತನಿಖೆ ಆರಂಭಿಸಿವೆ.
ಎರ್ನಾಕುಳಂನ ಮಹಿಳೆಯೊಬ್ಬರು ತನ್ನ ಪತಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಎರ್ನಾಕುಳಂ ಮೂಲದ ಮಹಿಳೆ ನಾಪತ್ತೆಯಾಗಿದ್ದಾರೆ ಎಂದು ಪತಿ ತಿಂಗಳ ಹಿಂದೆ ಹೈಕೋರ್ಟ್‍ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಮಹಿಳೆಯ ಹೇಳಿಕೆಯನ್ನು ಪಡೆಯುವಂತೆ ಪೋಲೀಸರಿಗೆ ಸೂಚಿಸಿದೆ. ಇದಾದ ಬಳಿಕ ಪೋಲೀಸರು ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾಳೆ.
ಯುವತಿ ಮತ್ತು ಅರ್ಜಿದಾರರ ನಡುವೆ ಕಳೆದ ವರ್ಷ ಅಕ್ಟೋಬರ್‍ನಲ್ಲಿ ವಿವಾಹವಾಗಿತ್ತು. ಬಳಿಕ ಪತಿ ತನಗೆ ಹೊರಗಡೆ ಯಾರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ. ಇತರರೊಂದಿಗೆ ಮಾತನಾಡದಂತೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದರು. ಬಳಿಕ ಧರ್ಮ ಬದಲಾಯಿಸುವಂತೆ ಒತ್ತಾಯಿಸಿ ದಬ್ಬಾಳಿಕೆ ಶುರುವಾಯಿತು. ತನ್ನನ್ನು ಕೋಣೆಯೊಳಗೆ ಬೀಗ ಹಾಕಿ ಬಂಧಿಸಿದ್ದರೆಂದೂ ಮಹಿಳೆ ಪೋಲೀಸರಿಗೆ ತಿಳಿಸಿದ್ದಾಳೆ. ಇದರ ಬೆನ್ನಲ್ಲೇ ಗುಪ್ತಚರ ಸಂಸ್ಥೆಗಳು ತನಿಖೆ ಆರಂಭಿಸಿವೆ. ಏತನ್ಮಧ್ಯೆ, ಪೋಲೀಸರು ನೀಡಿದ ವರದಿಯನ್ನು ಆಧರಿಸಿ ನ್ಯಾಯಾಲಯವು ಹೇಬಿಯಸ್ ಕಾರ್ಪಸ್ ಅನ್ನು ತಿರಸ್ಕರಿಸಿತು.
ಎರ್ನಾಕುಳಂನ ಮಹಿಳೆಯಿಂದ ಆಘಾತಕಾರಿ ಅಂಶ ಬಹಿರಂಗ: ಪತಿ ತನ್ನನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಆರೋಪ: ಗುಪ್ತಚರ ಸಂಸ್ಥೆಯಿಂದ ತನಿಖೆ ಆರಂಭ
0
ಸೆಪ್ಟೆಂಬರ್ 12, 2022