ಕಾಸರಗೋಡು: ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮದಿನಾಚರಣೆ ಅಂಗವಾಗಿ ಕಾಸರಗೋಡಿನ ವಿವಿಧೆಡೆ ಕರ್ಯಕ್ರಮ ಜರುಗಿತು. ಕರಂದಕ್ಕಾಡು ಶ್ರೀ ನಾರಾಯಣಗುರು ಮಂದಿರ, ಅಡ್ಕತ್ತಬೈಲ್ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ನೆಲ್ಲಿಕಟ್ಟೆಯ ಶ್ರೀಗುರುಮಂದಿರ, ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರ, ಪೆರ್ಲದ ವ್ಯಾಪಾರಿ ಭವನ ಸಭಾಂಗಣದಲ್ಲಿ ನಾರಾಯಣಗುರು ಜಯಂತಿ ಕಾರ್ಯಕ್ರಮ ಜರುಗಿತು.
ಅಸ್ಪøಶ್ಯತೆ ವಿರುದ್ಧ ಹೋರಾಡಿದ ಧೀಮಂತ:
ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ವಿರುದ್ಧ ಹೋರಾಡುವ ಮೂಲಕ ಬ್ರಹ್ಮಶ್ರೀ ನಾರಾಯಣಗುರುಗಳು ಇಡೀ ಕೇರಳದ ಸಮಾಜವನ್ನು ನವೋದಯದತ್ತ ಕೊಂಡೊಯ್ದಿರುವುದಾಗಿ ಬಂದರು ಮತ್ತು ಪುರಾತತ್ವ ಸಚಿವ ಅಹ್ಮದ್ ದೇವರಕೋವಿಲ್ ತಿಳಿಸಿದ್ದಾರೆ. ಅವರು ಶಿವಗಿರಿ ಮಠದ ಅಧೀನದಲ್ಲಿರುವ ಬಂಗಳಂನ ಕೂಟಪುನ್ನ ಶ್ರೀನಾರಾಯಣ ಆಶ್ರಮದಲ್ಲಿ ನಡೆದ ಶ್ರೀನಾರಾಯಣ ಗುರುಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುರುದೇವ ಭ್ರಷ್ಟ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿದ ಪ್ರಮುಖ ಸಮಾಜ ಸುಧಾರಕರಾಗಿದ್ದಾರೆ. ಗುರುಗಳು ದೇವಾಲಯ ಮತ್ತು ಶಾಲೆಗಳನ್ನು ಸ್ಥಾಪಿಸುವ ಮೂಲಕ ಶೋಷಿತರ ಉನ್ನತಿಗಾಗಿ ಶ್ರಮಿಸಿದರು. ಮಾಜಘಾತುಕ ಶಕ್ತಿಗಳ ವಿರುದ್ಧದ ಹೋರಾಟವೇ ಅವರ ಬದುಕಾಗಿತ್ತು ಎಂದು ಸಚಿವರು ಹೇಳಿದರು.
(ಶಿವಗಿರಿ ಮಠದ ಅಧೀನದಲ್ಲಿರುವ ಬಂಗಳಂನ ಕೂಟಪುನ್ನ ಶ್ರೀನಾರಾಯಣ ಆಶ್ರಮದಲ್ಲಿ ನಡೆದ ಶ್ರೀನಾರಾಯಣ ಗುರುಜಯಂತಿ ಕಾರ್ಯಕ್ರಮವನ್ನು ಸಚಿವ ಅಹ್ಮದ್ ದೇವರಕೋವಿಲ್ ಉದ್ಘಾಟಿಸಿದರು.)