ಕಾಸರಗೋಡು: ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಡಿಟಿಪಿಸಿ)ವತಿಯಿಂದ ಐದು ದಿನಗಳ ಕಾಲ ನಡೆದ ಓಣಂ ಆಚರಣೆ ಸಂಪನ್ನಗೊಂಡಿತು. ಡಿಟಿಪಿಸಿ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಓಣಂ ಆಚರಣೆಯನ್ನು ಆಯೋಜಿಸಿತ್ತು. ಐದು ದಿನಗಳ ಕಾಲ ನಡೆದ ಓಣಂ ಆಚರಣೆಯಲ್ಲಿ ವಿದ್ಯಾನಗರ ಸ್ಟೇಡಿಯಂ ಕಾರ್ನರ್, ಪರವನಡ್ಕದ ಸರ್ಕಾರಿ ವೃದ್ಧ ಸದನ, ಕಾಂಞಂಗಾಡ್ ಟೌನ್ ಹಾಲ್ ಮತ್ತು ಟೌನ್ ಸ್ಕ್ವೇರ್‍ನಲ್ಲಿ ನಾನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶನಿವಾರ ನಡೆದ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ 6 ತಂಡಗಳು ಭಾಗವಹಿಸಿದ್ದವು. ನಂತರ ಸಂಕೀರ್ತನಾ ನಾಡಕಲಾವೇದಿ ಕೋಟುಮಲ ವಾಲಗ ಸಂಘ ವತಿಯಿಂದ ಮಂಗಳಂಕಳಿ ಹಾಗೂ ಕುಟುಂಬಶ್ರೀ ಕಲಾವಿದರಿಂದ ತಿರುವಾತಿರ ಪ್ರದರ್ಶನ ನಡೆಯಿತು. ರೇಬಂಟ್ ವಾದ್ಯಮೇಳದ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.
ಓಣಂ ಆಚರಣೆ ಸಂಪನ್ನ: ಜನಮನಸೂರೆಗೊಂಡ ಕಲಾ, ಕ್ರೀಡಾ ಸ್ಪರ್ಧೆಗಳು
0
ಸೆಪ್ಟೆಂಬರ್ 11, 2022
Tags