ಪೆರ್ಲ: ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ, ವಿಜ್ಞಾನ-ಗಣಿತ ಶಾಸ್ತ್ರಗಳ ಶಿಕ್ಷಕರಾಗಿ ನಿವೃತ್ತರಾಗಿದ್ದ ದಿ. ಸೂರ್ಯಂಬೈಲ್ ಗೋಪಾಲಕೃಷ್ಣ ಭಟ್ ಅವರ ಸಂಸ್ಮರಣಾ ಗ್ರಂಥ 'ಶ್ರೀಮುಖ'ದ ಲೋಕಾರ್ಪಣಾ ಕಾರ್ಯಕ್ರಮ ಇತ್ತೀಚೆಗೆ ಆರ್ಲಪದವಿನ ಶ್ರೀ ದುರ್ಗಾ ಸಭಾ ಭವನದಲ್ಲಿ ಜರುಗಿತು. ದಿ. ಸೂರ್ಯಂಬೈಲ್ ಗೋಪಾಲಕೃಷ್ಣ ಭಟ್ ಅವರ ಧರ್ಮಪತ್ನಿ ಹೊನ್ನಮ್ಮ ಪುಸ್ತಕ ಲೋಕಾರ್ಪಣೆಗೈದರು.
ವೈದ್ಯ ಸಾಹಿತಿ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಎ.ಪಿ ಮಾಲತಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪುಂಡಿಕಾಯಿ ನಾರಾಯಣ ಭಟ್ ಶ್ರೀಮುಖ ಗ್ರಂಥದ ಪರಿಚಯ ನೀಡಿದರು. ಪ್ರಕಾಶಕರಾದ ಎಸ್. ರಾಮಚಂದ್ರ ಭಟ್, ಪ್ರಭಾವತೀ ನಾರಯಣ ಭಟ್, ಡಾ. ಶ್ರೀ ಕೃಷ್ಣ ಭಟ್, ಪ್ರಧಾನ ಸಂಪಾದಕ ನಿವೃತ್ತ ಪ್ರಾಧ್ಯಾಪಕ ಸುಬ್ರಹ್ಮಣ್ಯ ಭಟ್ ಖಂಡಿಗೆ (ಎಸ್.ಬಿ.ಖಂಡಿಗೆ), ಸಂಪಾದಕ ಪುಂಡಿಕಾಯಿ ನಾರಾಯಣ ಭಟ್ ಉಪಸ್ಥಿತರಿದ್ದರು. ಪ್ರೊ. ವಿ.ಬಿ ಅರ್ತಿಕಜೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಈ ಸಂದರ್ಭ ಗ್ರಂಥದ ಮುಖಪುಟ ವಿನ್ಯಾಸ ರಚನಾಕಾರ, ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ರಾಜೇಂದ್ರ ಬಜಕೂಡ್ಲು, ಪ್ರಧಾನ ಸಂಪಾದಕರಾದ ಎಸ್.ಬಿ ಖಂಡಿಗೆ ಹಾಗೂ ಸಂಪಾದಕ ಮಂಡಳಿ ಸದಸ್ಯರನ್ನು ಗೌರವಿಸಲಾಯಿತು.
ಸಂಸ್ಮರಣಾ ಗ್ರಂಥ 'ಶ್ರೀಮುಖ'ದ ಲೋಕಾರ್ಪಣಾ ಸಮಾರಂಭ, ಗೌರವಾರ್ಪಣೆ
0
ಸೆಪ್ಟೆಂಬರ್ 23, 2022