ಕುಂಬಳೆ: ಬಂದ್ಯೋಡು ಸಮೀಪದ ಇಚ್ಲಂಗೋಡು ರಫಿ-ಇಬ್ನ್-ಮಾಲಿಕ್ ದಿನಾರ್ ಮಕಾಂ ಉದಯಸ್ತಮಾನ ಉರೂಸ್ 2023ರ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಇಚ್ಲಂಗೋಡು ಜಮಾತ್ ಸಮಿತಿ ಪದಾಧಿಕಾರಿಗಳು ಹಾಗೂ ಉರೂಸ್ ಸಮಿತಿ ಪದಾಧಿಕಾರಿಗಳು ಜಂಟಿಯಾಗಿ ಕುಂಬಳೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವರು.
ಫೆ.6ರಿಂದ 26ರವರೆಗೆ ಉರೂಸ್ ಕಾರ್ಯಕ್ರಮಗಳು ನಡೆಯಲಿವೆ. ಉದ್ಘಾಟನಾ ಸಮಾವೇಶ, ಧಾರ್ಮಿಕ ಸಾಮರಸ್ಯ ಸಭೆ ಹಾಗೂ ಧಾರ್ಮಿಕ ಪ್ರವಚನ ವೇದಿಕೆಗಳನ್ನು ಆಯೋಜಿಸಲಾಗುವುದು. ಪ್ರಸ್ತುತ ಪ್ರಸ್ತುತತೆಯ ವಿಷಯಗಳ ಕುರಿತು ಉಪನ್ಯಾಸಗಳು ನಡೆಯಲಿವೆ. ಸುನ್ನತ್ ಜಮಾತ್ ನ ಖ್ಯಾತ ವಿದ್ವಾಂಸರನ್ನು ಒಂದೇ ವೇದಿಕೆಯಲ್ಲಿ ಕರೆತರುವ ಮೂಲಕ ಸಮಾರೋಪ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲು ಉದ್ದೇಶಿಸಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದರು.
ಖತೀಬ್ ಮುಹಮ್ಮದ್ ಇμರ್Áದ್ ಫೈಝಿ, ಮೊಯ್ತು ಹಾಜಿ, ಮಹ್ಮದ್ ಕುಟ್ಟಿ ಹಾಜಿ, ಕೋಶಾಧಿಕಾರಿ ಫಾರೂಕ್ ಪಚ್ಚಂಬಳ, ಉರೂಸ್ ಸಮಿತಿ ಸಂಚಾಲಕ ಹಸನ್ ಇಚ್ಲಂಗೋಡು, ಮಜೀದ್ ಪಚ್ಚಂಬಳ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಫೆಬ್ರವರಿಯಲ್ಲಿ ಇಚ್ಲಂಗೋಡು ಉದಯಸ್ತಮಾನ ಮಖಾಂ ಉರೂಸ್
0
ಸೆಪ್ಟೆಂಬರ್ 30, 2022
Tags