HEALTH TIPS

ರಾಹುಲ್​ಗೆ ತಮಿಳಿನ ಬೆಡಗಿ! ಮದುವೆ ಸುದ್ದಿ ಕೇಳುತ್ತಲೇ ರೋಮಾಂಚನಗೊಂಡ ಸಂಸದ- ಮುಖದ ತುಂಬ ನಗು!

 

        ಚೆನ್ನೈ: ಕಾಂಗ್ರೆಸ್​ನಿಂದ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಕುತೂಹಲದ ಘಟನೆ ನಡೆದಿದೆ. ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿಯವರು ಸಿಕ್ಕಾಪಟ್ಟೆ ಖುಷಿಯಾಗಿರುವ ಘಟನೆ ಇದಾಗಿದೆ. ಇದಕ್ಕೆ ಕಾರಣ ಮದುವೆಯ ವಿಷಯ!

            ಕನ್ಯಾಕುಮಾರಿಯ ಮಾರ್ತಾಂಡಂನಲ್ಲಿ ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರೊಬ್ಬರು ರಾಹುಲ್ ಗಾಂಧಿ ಬಳಿ ಮದುವೆ ಬಗ್ಗೆ ಮಾತೆತ್ತಿದ್ದಾರೆ. ಆ ಸಂದರ್ಭದಲ್ಲಿ ರಾಹುಲ್​ ತುಂಬಾ ಖುಷಿಯಿಂದ ರೋಮಾಂಚನಗೊಂಡಿದ್ದಾರೆ. ಕೂಡಲೇ ಆ ಮಹಿಳೆ ತಮಿಳು ಹುಡುಗಿಯನ್ನು ರಾಹುಲ್ ಗಾಂಧಿಗಾಗಿ ಹುಡುಕಲು ತಾವು ಸಿದ್ಧರಿರುವುದಾಗಿ ಹೇಳಿದಾಗ ರಾಹುಲ್​ ನಾಚಿ ನೀರಾದರು.


           ಇದರ ಚಿತ್ರಗಳನ್ನು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ. 'ಒಬ್ಬ ಮಹಿಳೆ ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ ರಾಹುಲ್ ಸಂತೋಷಗೊಂಡವರಂತೆ ಕಾಣುತ್ತಿದ್ದರು, ಇದು ಭಾರತ್ ಜೋಡೋ ಯಾತ್ರೆಯ 3 ನೇ ದಿನದ ಉಲ್ಲಾಸದ ಕ್ಷಣ' ಎಂದು ತಮಾಷೆಯಾಗಿ ಟ್ವೀಟ್​ ಮಾಡಿದ್ದಾರೆ.

            'ರಾಹುಲ್ ಗಾಂಧಿಯವರು ತಮಿಳುನಾಡನ್ನು ಪ್ರೀತಿಸುತ್ತಿದ್ದಾರೆಂದು ನನಗೆ ತಿಳಿದಿದೆ, ಈಗ ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಿದ್ದಾರೆ ಎಂಬುದೂ ತಿಳಿಯಿತು. ಮದುವೆ ಪ್ರಸ್ತಾಪ ಎತ್ತುತ್ತಿದ್ದಂತೆಯೇ ರಾಹುಲ್ ಗಾಂಧಿ ಉಲ್ಲಾಸಭರಿತರಾದರು. ಖುಷಿ ಖುಷಿಯಿಂದ ಆ ಮಹಿಳೆಯ ಜತೆ ಚರ್ಚೆ ನಡೆಸಿದರು' ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.

               ಕಾಂಗ್ರೆಸ್​ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿದೆ. ಈ 3500 ಕಿಮೀ ಪ್ರಯಾಣವು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಈ ಐದು ತಿಂಗಳ ಪಾದಯಾತ್ರೆಯನ್ನು ಸ್ವತಃ ರಾಹುಲ್ ಗಾಂಧಿ ಅವರು ಬುಧವಾರ ತಮಿಳುನಾಡಿನಿಂದ ಆರಂಭಿಸಲಿದ್ದಾರೆ. ಎರಡು ಹಂತಗಳಲ್ಲಿ ಪ್ರಯಾಣ ನಡೆಯಲಿದೆ.

A hilarious moment from day 3 of #BharatJodoYatra

During @RahulGandhi's interaction with women MGNREGA workers in Marthandam this afternoon, one lady said they know RG loved Tamil Nadu & they're ready to get him married to a Tamil girl! RG looks most amused & the photo shows it! pic.twitter.com/0buo0gv7KH

— Jairam Ramesh (@Jairam_Ramesh)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries