ಕೊಚ್ಚಿ: ವಿಝಿಂಜಂ ಬಂದರು ನಿರ್ಮಾಣ ವಿಚಾರದಲ್ಲಿ ಸರ್ಕಾರದ ವಿರುದ್ಧ ಅದಾನಿ ಗ್ರೂಪ್ ಹೈಕೋರ್ಟ್ ಮೆಟ್ಟಿಲೇರಿದೆ. ಬಂದರು ನಿರ್ಮಾಣಕ್ಕೆ ಪೋಲೀಸ್ ಭದ್ರತೆ ನೀಡಬೇಕೆಂಬ ಆದೇಶ ಜಾರಿಯಾಗಿಲ್ಲ ಎಂದು ಅದಾನಿ ಗ್ರೂಪ್ ಮನವಿಯಲ್ಲಿ ತಿಳಿಸಿದೆ.
ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಲಾಗಿದೆ. ಬಂದರು ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.
ವಿಝಿಂಜಂ ಯೋಜನೆಗೆ ಅಡ್ಡಿಪಡಿಸಲು ಮತ್ತು ಬಂದರು ನಿರ್ಮಾಣಕ್ಕೆ ಭದ್ರತೆ ಒದಗಿಸಲು ಪ್ರತಿಭಟನಾಕಾರರಿಗೆ ಯಾವುದೇ ಹಕ್ಕಿಲ್ಲ ಎಂದು ಹೈಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಒಂದು ವೇಳೆ ಸರ್ಕಾರಕ್ಕೆ ಪೆÇಲೀಸ್ ಭದ್ರತೆ ನೀಡಲು ಸಾಧ್ಯವಾಗದಿದ್ದರೆ ಕೇಂದ್ರ ಪಡೆಗಳನ್ನು ಕರೆಸಬಹುದು ಎಂದೂ ಸೂಚನೆ ನೀಡಲಾಗಿತ್ತು. ಆದರೆ ಅದಾನಿ ಗ್ರೂಪ್ ಇದು ಈಡೇರಿಲ್ಲ ಎಂದು ಹೇಳುತ್ತದೆ. ಈ ಅರ್ಜಿಯನ್ನು ಹೈಕೋರ್ಟ್ ಇಂದು ಪರಿಗಣಿಸಲಿದೆ.
ವಿಝಿಂಜಂನಲ್ಲಿ ಜನರು ಪ್ರತಿಭಟನೆ ನಡೆಸಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಅದಾನಿ ಗ್ರೂಪ್ ಆರೋಪಿಸಿದೆ.
ಬಂದರು ನಿರ್ಮಾಣಕ್ಕೆ ಪೋಲೀಸರು ಭದ್ರತೆ ನೀಡಿಲ್ಲ; ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲು ಕೋರ್ಟ್ ಮೆಟ್ಟಲೇರಿದ ಅದಾನಿ ಗ್ರೂಪ್
0
ಸೆಪ್ಟೆಂಬರ್ 14, 2022
Tags