ಪಾಲಕ್ಕಾಡ್: ನೀಲಂಬೂರ್-ನಂಜನಗೂಡು ರೈಲು ಮಾರ್ಗ ಯೋಜನೆ ಕುರಿತು ಇ ಶ್ರೀಧರನ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಯೋಜನೆ ಬುಡಮೇಲುಗೊಳಿಸಿದೆ ಎಂದು ಅವರು ಆರೋಪಿಸಿರುವÀರು. ಮೊನ್ನೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗಿನ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗಿಲ್ಲ ಎಂದು ಶ್ರೀಧರನ್ ಆರೋಪಿಸಿದರು.
ಪಿಣರಾಯಿ ವಿಜಯನ್-ಬಸವರಾಜ ಬೊಮ್ಮಾಯಿ ಸಭೆ ಭಾನುವಾರ ನಡೆದಿತ್ತು. ನಂಜನಗೂಡು-ನೀಲಂಬೂರ್ ರೈಲ್ವೇಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೇರಳ ಮುಂದಿಟ್ಟಿತ್ತು. ಪ್ರಸ್ತಾವಿತ ಮಾರ್ಗವು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುತ್ತದೆ. ಹಾಗಾಗಿ ಕರ್ನಾಟಕ ಸರ್ಕಾರ ಸಹಕಾರ ನೀಡುವುದಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದರು. ದಕ್ಷಿಣ ವಲಯ ಕೌನ್ಸಿಲ್ ಸಭೆಯ ನಿರ್ಧಾರದಂತೆ ಬೊಮ್ಮಾಯಿ ಅವರನ್ನು ಪಿಣರಾಯಿ ವಿಜಯನ್ ಭೇಟಿ ಮಾಡಿದ್ದರು.
ಬೊಮ್ಮಾಯಿ ಅವರ ಅಧಿಕೃತ ನಿವಾಸದಲ್ಲಿ ಸಭೆ ನಡೆದಿತ್ತು. ಇಬ್ಬರೂ ಅರ್ಧ ಗಂಟೆ ಚರ್ಚಿಸಿದರು. ಕರ್ನಾಟಕದ ಮುಖ್ಯ ಕಾರ್ಯದರ್ಶಿ ನೇತೃತ್ವದ ತಂಡವು ಪಿಣರಾಯಿ ಮತ್ತು ಕೇರಳ ಮುಖ್ಯ ಕಾರ್ಯದರ್ಶಿಯನ್ನು ಬರಮಾಡಿಕೊಂಡಿತ್ತು.
ನೀಲಂಬೂರು-ನಂಜನಗೂಡು ರೈಲು ಮಾರ್ಗ ಯೋಜನೆಯನ್ನು ಬುಡಮೇಲುಗೊಳಿಸಲಾಯಿತು: ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಇ.ಶ್ರೀಧರನ್
0
ಸೆಪ್ಟೆಂಬರ್ 20, 2022