ರಾಂಚಿ: ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಾರೆಂದು ಪಾಠ ಕಲಿಸಿದ ಶಿಕ್ಷಕರನ್ನೇ(Teachers) ಮರಕ್ಕೆ ಕಟ್ಟಿಹಾಕಿ ವಿದ್ಯಾರ್ಥಿಗಳು ಥಳಿಸಿದ ಘಟನೆ ಜಾರ್ಖಂಡ್ ನ ದುಮ್ಕಾ(Dumka, Jarkhand) ಗ್ರಾಮದಲ್ಲಿ ನಡೆದಿದೆ ಎಂದು ANI ವರದಿ ಮಾಡಿದೆ.
ಹಲವು ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಹಾಜರಾಗಿದ್ದ ಕಾರಣ ಅವರಿಗೆ ಪ್ರಾಯೋಗಿಕ ಪರೀಕ್ಷೆಗಳಲ್ಲಿ(Practical exam) ಕಡಿಮೆ ಅಂಕ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಶಿಕ್ಷಕರನ್ನು ಮರಕ್ಕೆ ಕಟ್ಟಿ ಹಾಕಿ ಶಾಲಾ ವಿದ್ಯಾರ್ಥಿಗಳು ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
"ನಾವು ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇವೆ ಮತ್ತು ಎಲ್ಲಾ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದ್ದೇವೆ. ನಾವು ಅಲ್ಲಿಗೆ ತಲುಪಿದಾಗ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ನೀಡಿದ್ದಾರೆ ಮತ್ತು ಶಿಕ್ಷಕರು ಸೂಕ್ತ ಪ್ರತಿಕ್ರಿಯೆಯನ್ನು ನೀಡಲಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು" ಎಂದು ಗೋಪಿಕಂದರ್ ದುಮ್ಕಾದ ಬ್ಲಾಕ್ ಶಿಕ್ಷಣ ವಿಸ್ತರಣಾಧಿಕಾರಿ ಸುರೇಂದ್ರ ಹೆಬ್ರಾಮ್ ಹೇಳಿಕೆ ನೀಡಿದ್ದಾಗಿ ANI ವರದಿ ಮಾಡಿದೆ.