ತಿರುವನಂತಪುರ: ಕೆಎಸ್‍ಆರ್‍ಟಿಸಿ ತನ್ನ ಕಂಡಕ್ಟರ್ ರಹಿತ ಬಸ್ ಸೇವೆಯನ್ನು ಆರಂಭಿಸಿದೆ. ತಿರುವನಂತಪುರಂನಿಂದ ಎರ್ನಾಕುಳಂಗೆ ಮತ್ತು ಎರ್ನಾಕುಳಂನಿಂದ ತಿರುವನಂತಪುರಕ್ಕೆ ಬಸ್ ಸೇವೆ ಲಭ್ಯವಿದೆ. ಇದು ದೂರದ ಪ್ರಯಾಣಿಕರಿಗೆ ಸಹಾಯಕವಾಗಲಿದೆ.
ಜನಶತಾಬ್ದಿ ರೈಲಿನ ಮಾದರಿಯಲ್ಲಿ 'ಎಂಡ್ ಟು ಎಂಡ್' ಸೇವೆಯನ್ನು ನಡೆಸಲಾಗುತ್ತಿದೆ. ಪ್ರತಿ ಪ್ರಯಾಣಕ್ಕೆ 408 ರೂ.ನಿಗದಿಪಡಿಸಲಾಗಿದೆ.
ಬಸ್ ಟಿಕೆಟ್‍ಗಳನ್ನು ಚಾಲಕರೇ ನೀಡುತ್ತಾರೆ. ತಿರುವನಂತಪುರಂ ಮತ್ತು ಎರ್ನಾಕುಳಂ ನಡುವೆ ಎರಡು ನಿಲ್ದಾಣಗಳಿವೆ. ಕೊಲ್ಲಂ ಆಯತ್ ಫೀಡರ್ ಸ್ಟೇಷನ್ ಮತ್ತು ಆಲಪ್ಪುಳ ಕೊಮ್ಮಡಿ ಫೀಡರ್ ಸ್ಟೇಷನ್ ನಲ್ಲಿ ಎಂಬಂತೆ ಎರಡು ಕಡೆ ಬಸ್ ನಿಲುಗಡೆಗೊಂಡು ಪ್ರಯಾಣಿಕರನ್ನು ಹತ್ತಿಸುತ್ತದೆ ಎಂದು ಕೆಎಸ್ ಆರ್ ಟಿಎಸ್ ಮಾಹಿತಿ ನೀಡಿದೆ. ಎರಡೂ ಸ್ಥಳಗಳಲ್ಲಿ ಒಂದು ನಿಮಿಷದ ನಿಲುಗಡೆ ಇರುತ್ತದೆ.
ಎಸಿ ಲೋ-ಫೆÇ್ಲೀರ್ ಬಸ್‍ಗಳ ಮೂಲಕ ಸೇವೆಯನ್ನು ನಿರ್ವಹಿಸಲಾಗುತ್ತದೆ.ಎಂಡ್ ಟು ಎಂಡ್ ಸೇವೆಯು ತಿರುವನಂತಪುರಂನಿಂದ ಬೆಳಿಗ್ಗೆ 5.10 ಕ್ಕೆ ಪ್ರಾರಂಭವಾಗಿ 9.40 ಕ್ಕೆ ಎರ್ನಾಕುಳಂ ತಲುಪುವ ರೀತಿಯಲ್ಲಿ ಹೊಂದಿಸಲಾಗಿದೆ.
ತಿರುವನಂತಪುರಂ ಸೆಂಟ್ರಲ್ ಬಸ್ ನಿಲ್ದಾಣ, ಕೊಲ್ಲಂ ಅಯಾಥಿಲ್ ಮತ್ತು ಅಲಪ್ಪುಳ ಕೊಮ್ಮಡಿ ಫೀಡರ್ ನಿಲ್ದಾಣದಿಂದ ಬಸ್ ಹೊರಡುವ ಅರ್ಧ ಗಂಟೆ ಮೊದಲು ಟಿಕೆಟ್‍ಗಳನ್ನು ಬುಕ್ ಮಾಡಬಹುದು. ಪ್ರಯಾಣ ಅನುಕೂಲಕ್ಕೆ ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ಟಿಕೆಟ್‍ಗಳನ್ನು ಬುಕ್ ಮಾಡಬಹುದು. ರಜಾ ದಿನಗಳಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸೇವೆ ಇರುವುದಿಲ್ಲ ಎಂದು ತಿಳಿಸಲಾಗಿದೆ. ಇದು ಯಶಸ್ವಿಯಾದರೆ ಮುಂದೆ ಕಾಸರಗೋಡು-ಎರ್ನಾಕುಳಂ ಸೇವೆ ಕೂಡಾ ಆರಂಭಗೊಳ್ಳಲಿದೆ.
ಕಂಡಕ್ಟರ್ ರಹಿತ ಬಸ್ ಸೇವೆ: ಜನಶತಾಬ್ದಿ ಸಂಚಾರ ಆರಂಭ: ಎಂಡ್ ಟು ಎಂಡ್ ಸೇವೆ
0
ಸೆಪ್ಟೆಂಬರ್ 27, 2022