ಕಾಸರಗೋಡು: ಸ್ವಯಂಪ್ರೇರಿತ ರಕ್ತದಾನ ದಿನದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಲು ಅನುಕರಣೀಯ ಕೆಲಸದೊಂದಿಗೆ ಜಿಲ್ಲಾ ವೈದ್ಯಕೀಯ ಕಛೇರಿ (ಆರೋಗ್ಯ) ನೌಕರರು ಗಮನ ಸೆಳೆದಿದ್ದಾರೆ. ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ನೌಕರರು ರಕ್ತದಾನ ಮಾಡಿದರು. ಜಿಲ್ಲಾ ವೈದ್ಯಕೀಯ ಕಚೇರಿಯ ವಿವಿಧ ವಿಭಾಗಗಳಿಗೆ ಸೇರಿದ 15 ನೌಕರರು ರಕ್ತದಾನ ಮಾಡಿದರು.
ದಿನಾಚರಣೆ ಅಂಗವಾಗಿ ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ವೈದ್ಯಕೀಯ ಕಚೇರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ಉದ್ಘಾಟಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಹಾಗೂ ಟಿಬಿ ಅಧಿಕಾರಿ ಡಾ.ಟಿ.ಪಿ.ಅಮೀನಾ ಅಧ್ಯಕ್ಷತೆ ವಹಿಸಿದ್ದರು. ‘ಞನ್ ತಾನ್ ಕೇಸ್ ಕೋಡ್’ ಖ್ಯಾತಿಯ ಪಿ.ಪಿ.ಕುಂಞÂ್ಞ ಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು.
ಜಿಲ್ಲಾ ಉಪ ವೈದ್ಯಾಧಿಕಾರಿ (ಆರೋಗ್ಯ) ಡಾ.ಇ.ಮೋಹನನ್, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಎ.ಮುರಳೀಧರ ನಲ್ಲೂರಾಯ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಗೀತಾ ಗುರುದಾಸ್, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ.ಕೆ.ವಿ.ಪ್ರಕಾಶ್ ಮಾತನಾಡಿದರು. ರಕ್ತನಿಧಿ ವೈದ್ಯಾಧಿಕಾರಿ ಡಾ.ನಿಮ್ಮಿ ಜಾನ್ ರಕ್ತದಾನ ಕುರಿತು ತರಗತಿ ನಡೆಸಿದರು. ಜಿಲ್ಲಾ ಸಮೂಹ ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠ ಸ್ವಾಗತಿಸಿ, ಉಪ ಸಮೂಹ ಮಾಧ್ಯಮ ಅಧಿಕಾರಿ ಎಸ್.ಸಯನಾ ಧನ್ಯವಾದವಿತ್ತರು.
ಸ್ವತಃ ರಕ್ತದಾನಗೈದು ಮಾದರಿಯಾದ ಜಿಲ್ಲಾ ವೈದ್ಯಕೀಯ ಕಚೇರಿ ನೌಕರರು
0
ಸೆಪ್ಟೆಂಬರ್ 30, 2022