ಜಮ್ಮು: ಐದು ದಶಕಗಳ ಕಾಂಗ್ರೆಸ್‌ನ ಒಡನಾಟವನ್ನು ಕೊನೆಗೊಳಿಸಿದ ಕಾಂಗ್ರೆಸ್‌ನ ಒಡನಾಟವನ್ನು ಕೊನೆಗೊಳಿಸಿದ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಅವರು, ಕೆಲವೇ ದಿನಗಳಲ್ಲಿ ಹೊಸ ಪಕ್ಷವನ್ನು ಸ್ಥಾಪಿಸುವ ಸಾಧ್ಯತೆಯಿದೆ.
ಭಾನುವಾರ ದೆಹಲಿಯಿಂದ ಜಮ್ಮುವಿಗೆ ಬಂದ ಆಜಾದ್ ಅವರು, 'ಪಕ್ಷ ಸ್ಥಾಪನೆಗೂ ಮುನ್ನ, ಸೋಮವಾರದಂದು ಮಾಧ್ಯಮ ಮಿತ್ರರನ್ನು ಆಹ್ವಾನಿಸಿದ್ದೇನೆ.ಕಾರ್ಯಕರ್ತರು ಹಾಗೂ ನಾಯಕರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೇನೆ' ಎಂದು ಪತ್ರಕರ್ತರಿಗೆ ತಿಳಿಸಿದರು.
ಇದೇ ವೇಳೆ, ಕೆಲವೇ ದಿನಗಳಲ್ಲಿ ಹೊಸ ಪಕ್ಷ ಘೋಷಣೆಯಾಗಲಿದೆ ಎಂಬ ಸುದ್ದಿಯನ್ನು ಆಜಾದ್ ಅವರ ಆಪ್ತರೊಬ್ಬರು ಖಚಿತಪಡಿಸಿದ್ದಾರೆ. 'ಆಜಾದ್ ಅವರು ಭಾನುವಾರ ಹಿರಿಯ ಹಾಗೂ ಎರಡನೇ ಹಂತದ ನಾಯಕರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ. ಇದೇ 27ರಂದು ಅವರು ಶ್ರೀನಗರಕ್ಕೂ ಭೇಟಿ ನೀಡಲಿದ್ದಾರೆ' ಎಂದು ಹೇಳಿದರು.
'ಹೊಸ ಪಕ್ಷದ ಹೆಸರು ಹಾಗೂ ಧ್ವಜ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ' ಎಂದೂ ಅವರು ಹೇಳಿದರು.