ಬದಿಯಡ್ಕ: ವಿದ್ಯಾನಗರ-ಮಾನ್ಯ-ಮುಂಡಿತ್ತಡ್ಕ ರಸ್ತೆಯ ದೇವರಕೆರೆಯಿಂದ ಮುಂಡಿತ್ತಡ್ಕದ ತನಕ ರಸ್ತೆ ಸಂಚಾರ ಅಯೋಗ್ಯವಾಗಿದ್ದು ಕಾಮಗಾರಿ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಖಾಸಗಿ ಬಸ್ ಗಳು ನಿನ್ನೆ ಮುಷ್ಕರ ನಡೆಸಿತು. ನಿನ್ನೆ ನಡೆಸಿರುವ ಮುಷ್ಕರ ಕೇವಲ ಪೂರ್ವಸೂಚನೆ ಮಾತ್ರವಾಗಿದ್ದು, ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಅನಿರ್ಧಿಷ್ಟ ಮುಷ್ಕರ ನಡೆಸಲಾಗುವುದೆಂದು ಎಚ್ಚರಿಸಲಾಗಿದೆ.
ಕಳೆದ ವರ್ಷ ವಿದ್ಯಾನಗರದಿಂದ ದೇವರಕರವರೆಗಿನ 21 ಕಿ.ಮೀ ಉದ್ದದ ರಸ್ತೆಯಲ್ಲಿ 6,700 ಕಿ.ಮೀ. ವೆಚ್ಚದಲ್ಲಿ ದುರಸ್ಥಿಗೊಳಿಸಲಾಗಿತ್ತು. ದೇವರಕೆರೆಯಿಂದ ನೀರ್ಚಾಲು ವರೆಗಿನ ಭಾಗವು ಗುಂಡಿಗಳಿಂದ ತುಂಬಿದೆ. ಈ ಮಾರ್ಗವಾಗಿ ವಾಹನಗಳು ಸಂಚರಿಸುವಂತಿಲ್ಲ. ಈ ಮಾರ್ಗದಲ್ಲಿ 8 ಬಸ್‍ಗಳು ಸಂಚರಿಸುತ್ತಿವೆ. ಆದರೆ ರಸ್ತೆ ಹಾಳಾಗಿರುವುದರಿಂದ ಈ ಭಾಗದ ವಿದ್ಯಾರ್ಥಿಗಳು ಸೇರಿದಂತೆ ಜನರು ಪರದಾಡುವಂತಾಗಿದೆ. ಮಾನ್ಯ ಚುಕಿನಡ್ಕದಲ್ಲಿ ನಿನ್ನೆ ಬೆಳಗ್ಗೆ ನಡೆದ ಪ್ರತಿಭಟನಾ ಸಭೆಯಲ್ಲಿ ಬಸ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಕೆ. ಗಿರೀಶ್ ಉದ್ಘಾಟಿಸಿದರು. ಬಸ್ ಮಾಲೀಕರಾದ ಶಾಫಿ, ಇಬ್ರಾಹಿಂ, ಉದ್ಯೋಗಿ ಫಾರೂಕ್, ಸಾಮಾಜಿಕ ಕಾರ್ಯಕರ್ತ ಎಂ.ಎಚ್.ಜನಾರ್ದನ ಮೊದಲಾದವರಿದ್ದರು. ಬಸ್ ಮುಷ್ಕರದಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಜನರು ಪರದಾಡಿದರು.
ರಸ್ತೆ ನವೀಕರಣ ವಿಳಂಬ: ದೇವರಕೆರೆ-ಮುಂಡಿತ್ತಡ್ಕ ರಸ್ತೆ ಶೀಘ್ರ ದುರಸ್ಥಿಗೆ ಒತ್ತಾಯಿಸಿ ಖಾಸಗೀ ಬಸ್ ಮುಷ್ಕರ: ಪರದಾಡಿದ ಸಾರ್ವಜನಿಕರು
0
ಸೆಪ್ಟೆಂಬರ್ 22, 2022