HEALTH TIPS

ಸಾವಿರಾರು ಕೋಟಿ ರೂ. ಚೀನಾಕ್ಕೆ ವರ್ಗಾವಣೆ; ಆಯಪ್​ಗಳ ವಂಚನೆ ಬಯಲಿಗೆಳೆದ ಜಾರಿ ನಿರ್ದೇಶನಾಲಯ

 

         ನವದೆಹಲಿ: ಸಾಲ ನೀಡಿಕೆ ಹಾಗೂ ಬೆಟ್ಟಿಂಗ್​ನಿರತ ಆಪ್​ಗಳ ಸಹಿತ ಚೀನಾ ನಿಯಂತ್ರಿತ ನೂರಕ್ಕೂ ಹೆಚ್ಚು ಆಪ್​ಗಳು ಭಾರತದಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಲೆಕ್ಕ ಪರಿಶೋಧಕರ (ಚಾರ್ಟರ್ಡ್ ಅಕೌಂಟೆಂಟ್- ಸಿಎ) ನೆರವಿನಿಂದ ತಮ್ಮ ದೇಶಕ್ಕೆ ರವಾನಿಸಿದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

               ಆರಂಭದಲ್ಲಿ ಸಿಎಗಳ ನೆರವಿನಿಂದ ಭಾರತದ ನಕಲಿ ನಿರ್ದೇಶಕರ ಮೂಲಕ ಕಂಪನಿಗಳನ್ನು ಸ್ಥಾಪಿಸಲಾಗುತ್ತದೆ. ನಂತರ, ಚೀನೀ ನಾಗರಿಕರು ಭಾರತಕ್ಕೆ ಬಂದು ಈ ಕಂಪನಿಗಳ ನಿರ್ದೇಶಕ ಸ್ಥಾನವನ್ನು ವಹಿಸಿಕೊಳ್ಳುತ್ತಾರೆ ಎಂಬುದು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆಯಿಂದ ಗೊತ್ತಾಗಿದೆ. ಚೀನಾದ ಕೆಲವು ನಾಗರಿಕರು ಕಾನೂನುಬಾಹಿರವಾಗಿ ಹಲವು ಭಾರತೀಯ ಕಂಪನಿಗಳನ್ನು ಆರಂಭಿಸಿದ್ದಾರೆ. ಈ ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿ ಚೀನಾಕ್ಕೆ ವರ್ಗಾಯಿಸಿವೆ. ಈ ರೀತಿಯಾಗಿ ಅಕ್ರಮ ನಡೆಸುತ್ತಿರುವುದನ್ನು ಪತ್ತೆ ಹಚ್ಚಲು ಹಣಕಾಸು ಬೇಹುಗಾರಿಕೆ ಘಟಕಕ್ಕೆ (ಎಫ್​ಐಯು) ಕೂಡ ಸಾಧ್ಯವಾಗಿರಲಿಲ್ಲ. ದೇಶದಿಂದ ಅಪಾರ ಪ್ರಮಾಣದ ಹಣ ಸೋರಿಕೆಯಾಗುತ್ತಿರುವ ಸುಳಿವು ತಿಳಿದು ಚೀನಾ ನಿಯಂತ್ರಿತ ನೂರಕ್ಕೂ ಅಧಿಕ ಆಪ್​ಗಳ ಮೇಲೆ ದಾಳಿ ಮಾಡಿದಾಗ ಈ ವಂಚನೆ ಬಯಲಾಗಿದೆ. ಈ ಆಪ್​ಗಳು ಸಾಲ ನೀಡಿಕೆ, ಡೇಟಿಂಗ್ ಮತ್ತು ಬೆಟ್ಟಿಂಗ್​ಗೆ ಸಂಬಂಧಿಸಿವೆ. ಈಗ ಭಾರತೀಯ ಪಾವತಿ ಸಂಸ್ಥೆಗಳ ವಿರುದ್ಧ ಇನ್ನಷ್ಟು ಕ್ರಮ ಕೈಗೊಳ್ಳಲು ಬ್ಯಾಂಕ್​ಗಳು ಮತ್ತು ಇತರ ನಿಯಂತ್ರಣಾ ಸಂಸ್ಥೆಗಳ ಜೊತೆ ಇ.ಡಿ. ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ.

                  ಭಾರತೀಯರ ನೇಮಕ: ಚೀನಿ ಕಂಪನಿಗಳು, ಬ್ಯಾಂಕ್ ಮತ್ತು ವಾಣಿಜ್ಯ ಖಾತೆಗಳನ್ನು ತೆರೆಯಲು ಭಾರತೀಯರನ್ನು ನೇಮಕ ಮಾಡಿಕೊಳ್ಳುತ್ತವೆ. ದುಬಾರಿ ಬಡ್ಡಿ ದರಕ್ಕೆ ನೀಡಲಾಗುವ ಸಾಲಗಳ ವಸೂಲಿಗೆ ಅವುಗಳ ಗ್ರಾಹಕರಿಗೆ ಬೆದರಿಕೆ ಹಾಕುತ್ತವೆ ಎನ್ನುವುದು ಈಗಾಗಲೇ ಬಯಲಾಗಿದೆ.

                 ಬೆಟ್ಟಿಂಗ್ ಆಯಪ್​ಗಳದ್ದೇ 1,300 ಕೋಟಿ: ಬೆಟ್ಟಿಂಗ್ ಆಪ್​ಗಳೇ 1,300 ಕೋಟಿ ರೂಪಾಯಿ ಸಂಗ್ರಹಿಸಿರುವುದು ಇ.ಡಿ. ವಿಚಾರಣೆಯಿಂದ ತಿಳಿದು ಬಂದಿದೆ. ಅಕ್ರಮ ಹಣ ವರ್ಗಾವಣೆ ಸಂಬಂಧ ಎರಡು ವರ್ಷಗಳ ಹಿಂದೆ ಚೀನಿ ಬೆಟ್ಟಿಂಗ್ ಮತ್ತು ಡೇಟಿಂಗ್ ಆಪ್​ಗಳು ಎಚ್​ಎಸ್​ಬಿಸಿ ಬ್ಯಾಂಕ್​ನಲ್ಲಿ ಹೊಂದಿದ್ದ 47 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದ್ದ ಇ.ಡಿ., ಪೇಮೆಂಟ್ ಗೇಟ್​ವೇಗಳಾದ ಪೇಟಿಎಂ, ಕ್ಯಾಶ್​ಫ್ರೀ ಮತ್ತು ರೇಝುರ್ ಪೇ ಮೇಲೆ ನಿಗಾ ವಹಿಸಿತ್ತು. ದೊಡ್ಡ ಪ್ರಮಾಣದ ಹಣ ವರ್ಗಾವಣೆ ವ್ಯವಹಾರ ಗಳನ್ನು ಎಫ್​ಐಯು ಗಮನಕ್ಕೆ ತಾರದ ಹಿನ್ನೆಲೆಯಲ್ಲಿ ಅವುಗಳ ಮೇಲೆ ಇ.ಡಿ. ಕಣ್ಣು ನೆಟ್ಟಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries