ಕನ್ಯಾಮಾಸ ಪೂಜೆ: ಶುಕ್ರವಾರದಿಂದ ಗರ್ಭಗೃಹ ತೆರೆಯಲಿರುವ ಶಬರಿಮಲೆ ಸನ್ನಿಧಿ
0
ಸೆಪ್ಟೆಂಬರ್ 15, 2022
ಪತ್ತನಂತಿಟ್ಟ: ಕನ್ಯಾಮಾಸ ಪೂಜೆಗಾಗಿ ಶಬರಿಮಲೆ ಶ್ರೀ ಧರ್ಮ ಶಾಸ್ತಾ ದೇವಾಲಯವನ್ನು ಶುಕ್ರವಾರ ತೆರೆಯಲಾಗುವುದು. ಸಂಜೆ 5: ರಿಂದ ಗರ್ಭಗೃಹದ ಬಾಗಿಲು ತೆರೆಯಲಾಗುತ್ತದೆ.
ಶನಿವಾರ ಬೆಳಗ್ಗೆ 5 ಗಂಟೆಯಿಂದ ನಿತ್ಯ ನಿರ್ಮಾಲ್ಯ ಹಾಗೂ ಅಭಿμÉೀಕ ನಡೆಯಲಿದೆ.
ಗರ್ಭಗೃಹ ಸೆ. 21 ರವರೆಗೆ ತೆರೆದಿರುತ್ತದೆ. ಪ್ರತಿದಿನ ಮುಂಜಾನೆ 5.30ಕ್ಕೆ ಮಹಾಗಣಪತಿ ಹೋಮ ನಡೆಯಲಿದೆ. ನಂತರ ತುಪ್ಪದ ಅಭಿಷೇಕ ಆರಂಭವಾಗಲಿದೆ. ಈ ದಿನಗಳಲ್ಲಿ ಉದಯಾಸ್ತಮಯ ಪೂಜೆ, ಅμÁ್ಟಭಿಷೇಕ, 25 ಕಲಶಾಭಿಷೇಕ, ಕಳಭಾಭಿಷೇಕ, ಪಡಿಪೂಜೆ, ಪುμÁ್ಪಭಿಷೇಕವೂ ನಡೆಯಲಿದೆ.
21ರಂದು ರಾತ್ರಿ 10 ರಿಂದ ಹರಿವರಾಸನಂ ಹಾಡುವ ಮೂಲಕ ಕಾರ್ಯಕ್ರಮ ಮುಕ್ತಾಯವಾಗಲಿದೆ. ಭಕ್ತರು ದರ್ಶನಕ್ಕೆ ವರ್ಚುವಲ್ ಸರತಿ ವ್ಯವಸ್ಥೆ ಬಳಸಬೇಕು. ನಿಲಕ್ಕ್ಕಲ್ ನಲ್ಲಿ ಭಕ್ತರಿಗಾಗಿ ಸ್ಪಾಟ್ ಬುಕ್ಕಿಂಗ್ ಕೌಂಟರ್ ಗಳನ್ನು ಸಹ ಸ್ಥಾಪಿಸಲಾಗಿದೆ.
Tags