ಕುಂಬಳೆ: ಕುಂಬಳೆ ಹೆಲ್ತ್ ಬ್ಲಾಕ್‍ನ ಆರೋಗ್ಯ ಕಾರ್ಯಕರ್ತರಿಗೆ ವಿಪತ್ತು ನಿರ್ವಹಣೆ ಕುರಿತು ತರಬೇತಿ ನೀಡಲಾಯಿತು. ಅನಾಹುತಗಳನ್ನು ಎದುರಿಸುವುದು ಹೇಗೆ, ಅನಾಹುತಗಳ ಪರಿಣಾಮಗಳನ್ನು ಮುಂಗಾಣುವುದು ಮತ್ತು ತಗ್ಗಿಸುವುದು ಹೇಗೆ, ಸಿಪಿಆರ್ ಮಾಡುವುದು ಹೇಗೆ, ಗಂಟಲಲ್ಲಿ ಆಹಾರ ಸಿಕ್ಕಿಕೊಂಡರೆ ಏನು ಮಾಡಬೇಕು, ಅಗ್ನಿ ಅವಘಡ ಸಂದರ್ಭ ನಿಯಂತ್ರಣ ಹೇಗೆ ಮುಂತಾದ ವಿಷಯಗಳ ಕುರಿತು ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು ದಿನದ ತರಬೇತಿಯನ್ನು ನಡೆಸಲಾಯಿತು. ಕುಂಬಳೆ, ಮಧೂರು, ಪುತ್ತಿಗೆ, ಬದಿಯಡ್ಕ, ಕುಂಬ್ಡಾಜೆ, ಎಣ್ಮ್ಮಕಜೆ, ಬೆಳ್ಳೂರು ಪಂಚಾಯತಿಗಳ ವೈದ್ಯಾಧಿಕಾರಿ, ಆರೋಗ್ಯ ನಿರೀಕ್ಷಕರು, ಜೆಎಚ್‍ಐ, ಜೆಪಿಎಚ್‍ಎನ್ ಮತ್ತು ಆಶಾ ಕಾರ್ಯಕರ್ತೆಯರು ತರಬೇತಿಯಲ್ಲಿ ಭಾಗವಹಿಸಿದ್ದರು.
ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಉದ್ಘಾಟಿಸಿದರು. ಕಂದಾಯ, ಅಗ್ನಿಶಾಮಕ ಮತ್ತು ಆರೋಗ್ಯ ಇಲಾಖೆಗಳ ತಜ್ಞರು ತರಬೇತಿ ನೀಡಿದರು. ಡಾ.ಸತ್ಯ ಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಿಪತ್ತು ನಿರ್ವಹಣಾ ವಿಶ್ಲೇಷಕ ಪ್ರೇಮ್‍ಜಿ ಪ್ರಕಾಶ್, ಅಗ್ನಿಶಾಮಕ ಮತ್ತು ರಕ್ಷಣಾಧಿಕಾರಿ ಉಮ್ಮರ್ ಶಾಫಿ, ಡಾ.ಸುಬ್ಬ ಗಟ್ಟಿ ತರಗತಿ ನಡೆಸಿದರು. ಆರೋಗ್ಯ ನಿರೀಕ್ಷಕ ಬಿ.ಅಶ್ರಫ್ ಸ್ವಾಗತಿಸಿ, ಆರೋಗ್ಯ ನಿರೀಕ್ಷಕಿ ನಿಶಾಮೋಳ್ ವಂದಿಸಿದರು.
ಕುಂಬಳೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವಿಪತ್ತು ನಿರ್ವಹಣೆ ತರಬೇತಿ
0
ಸೆಪ್ಟೆಂಬರ್ 25, 2022