ವಯನಾಡ್: ವೈತ್ತಿರಿಯಲ್ಲಿ ಪ್ರಪಾತಕ್ಕೆ ಬಿದ್ದು ಓರ್ವ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ. ಕಲ್ಪಟ್ಟ ಪೆರುಂಠಟ್ಟ ನಿವಾಸಿ ಅಭಿಜಿತ್ ಮೃತಪಟ್ಟವರು.ಕಲ್ಪಟ್ಟಾ ಪೆರುಂಠಟ್ಟದ ಐವರು ವೈತ್ತಿರಿಯ ಥಳಿಮಲ ಭಾಗದಲ್ಲಿ ಪ್ರಪಾತಕ್ಕೆ ಬಿದ್ದು ಈ ಪೈಕಿ ಓರ್ವ ಮೃತಪಟ್ಟನು.
ಗುಂಪಿನಲ್ಲೊಬ್ಬನಿಗೆ ಗಾಯಗಳಾಗಿ ಮೆಪ್ಪಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲಿಮಲದಿಂದ ಎಂಟು ಕಿಲೋಮೀಟರ್ ಕಡಿದಾದ ತಾಲಿಮಲಪತಿ ಎಂಬ ಕಮರಿಯಲ್ಲಿ ಅವರು ಬಿದ್ದಿದ್ದಾರೆ.
ಏತನ್ಮಧ್ಯೆ, ಯುವಕರು ಬಿದ್ದ ಪ್ರದೇಶವು ಸಂಚಾರ ನಿಬರ್ಂಧಿಸಲಾದ ಪ್ರದೇಶವಾಗಿದೆ. ಈ ನಿಬರ್ಂಧಿತ ಪ್ರದೇಶಕ್ಕೆ ಯುವಕರು ಹೇಗೆ ಬಂದರು ಎಂಬ ಬಗ್ಗೆ ಪೋಲೀಸರು ತನಿಖೆ ಆರಂಭಿಸಿದ್ದಾರೆ.
ವೈತಿರಿಯಲ್ಲಿ ಪ್ರಪಾತಕ್ಕೆ ಬಿದ್ದ ಯುವಕರು: ಓರ್ವನ ದುರ್ಮರಣ
0
ಸೆಪ್ಟೆಂಬರ್ 08, 2022
Tags