ಕಾಸರಗೋಡು: ದಕ್ಷಿಣ ಭಾರತದ ನವೋದಯ ವಿದ್ಯಾಲಯಗಳ ಪ್ರಾದೇಶಿಕ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಗಳಿಗೆ ಕಾಸರಗೋಡು ನವೋದಯ ವಿದ್ಯಾಲಯ ವೇದಿಕೆಯಾಗಲಿದೆ. ಸೆಪ್ಟೆಂಬರ್ 23 ರಿಂದ 25 ರವರೆಗೆ ಚಾಂಪಿಯನ್‍ಶಿಪ್ ಆಯೋಜಿಸಲಾಗಿದೆ. 23ರಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ಪಂದ್ಯಾಟ ಉದ್ಘಾಟಿಸುವರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರಚಂದ್ ಅಧ್ಯಕ್ಷತೆ ವಹಿಸುವರು. ಪುಲ್ಲೂರು ಪೆರಿಯ ಪಂಚಾಯಿತಿ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನವೋದಯ ವಿದ್ಯಾಲಯ ಸಮಿತಿ ಹೈದರಾಬಾದ್ ಅಧೀನದಲ್ಲಿ ಬರುವ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ, ಲಕ್ಷದ್ವೀಪ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. 25ರಂದು ನಡೆಯುವ ಸಮಾರೋಪ ಸಮಾರಂಭವನ್ನು ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್ ರಹಮಾನ್ ಉದ್ಘಾಟಿಸುವರು.
ಇಂದಿನಿಂದ ನವೋದಯದಲ್ಲಿ ಪ್ರಾದೇಶಿಕ ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್
0
ಸೆಪ್ಟೆಂಬರ್ 22, 2022