ಮಧೂರು: ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘ ಕಾಸರಗೋಡು ಇದರ ನೇತೃತ್ವದಲ್ಲಿ ಇತ್ತೀಚೆಗೆ ಮಧೂರು ಶ್ರೀ ಮದನಂತೇಶ್ವರ ಶ್ರೀ ಸಿದ್ಧಿವಿನಾಯಕ ದೇವರ ದಿವ್ಯ ಸನ್ನಿಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದಲ್ಲಿ ಕೀರ್ತಿಶೇಷ ಪೊಟ್ಟಿಪ್ಪಲ ನಾರಾಯಣ ಭಟ್ ಇವರು ಮಧೂರು ಶ್ರೀ ಮದನಂತೇಶ್ವರ ಶ್ರೀ ಸಿದ್ದಿವಿನಾಯಕ ದೇವರ ಕುರಿತಾಗಿ ಬರೆದ ಆಯ್ದ ಭಕ್ತಿಗೀತೆಗಳನ್ನು ಡಾ. ವಾಣಿಶ್ರೀ ಕಾಸರಗೋಡು, ಗುರುರಾಜ್ ಎಂ.ಆರ್ ಕಾಸರಗೋಡು, ಪ್ರಣಮ್ಯದೇವಿ ಕಾಸರಗೋಡು, ಪ್ರಖ್ಯಾತ್ ಭಟ್ ಕಾಸರಗೋಡು, ರಾಜೇಶ್ ಕಾಸರಗೋಡು ಹಾಗೂ ಪ್ರಜ್ಞಾ ಪಿ ಎಸ್ ಮುಂತಾದವರು ಹಾಡಿ ದೇವರ ಕೃಪೆಗೆ ಪಾತ್ರರಾದರು.
ಡಾ. ವೆಂಕಟ ಗಿರೀಶ್ ಉಪಸ್ಥಿತರಿದ್ದರು. ತದನಂತರ ದೇವಾಲಯದ ವತಿಯಿಂದ ಜಗದೀಶ್ ಕೂಡ್ಲು ಇವರು ಕಲಾವಿದರಿಗೆ ಗೌರವಪೂರ್ವಕವಾಗಿ ದೇವರ ಪ್ರಸಾದವನ್ನಿತ್ತು ಅಭಿನಂದಿಸಿದರು. ಡಾ. ವಾಣಿಶ್ರೀ ಕಾಸರಗೋಡು ನಿರೂಪಿಸಿದರು. ಗುರುರಾಜ್ ಕಾಸರಗೋಡು ವಂದಿಸಿದರು.
ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದಿಂದ ಮಧೂರಲ್ಲಿ ಸಾಂಸ್ಕøತಿಕ ಕಾರ್ಯಕ್ರಮ
0
ಸೆಪ್ಟೆಂಬರ್ 19, 2022