ನವದೆಹಲಿ: ನವರಾತ್ರಿಯ ಪ್ರಯುಕ್ತ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಶೇಷ ಮೆನುವನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ.
ಈ ವಿಶೇಷ ಆಫರ್ ಬಗ್ಗೆ ಕೂ ಮಾಡಿರುವ ರೈಲ್ವೇ ಸಚಿವಾಲಯ, ಈ ವಿಶೇಷ ಮೆನುವನ್ನು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನೀಡಲಾಗುವುದು ಮತ್ತು 'ಫುಡ್ ಆನ್ ಟ್ರ್ಯಾಕ್' ಅಪ್ಲಿಕೇಶನ್‌ನಿಂದ ಆರ್ಡರ್ ಮಾಡಬಹುದು ಎಂದು ಸಚಿವಾಲಯ ಹೇಳಿದೆ.
'ನವರಾತ್ರಿಯ ಮಂಗಳಕರ ಹಬ್ಬದ ಸಂದರ್ಭದಲ್ಲಿ, ಭಾರತೀಯ ರೈಲ್ವೇಯು ವಿಶೇಷ ಮೆನುವನ್ನು ನಿಮಗೆ ಪೂರೈಸುತ್ತಿದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನೀಡಲಾಗುತ್ತದೆ. ನಿಮ್ಮ ರೈಲು ಪ್ರಯಾಣಕ್ಕಾಗಿ 'ಫುಡ್ ಆನ್ ಟ್ರ್ಯಾಕ್' ಅಪ್ಲಿಕೇಶನ್‌ನಿಂದ ನವರಾತ್ರಿ ಭಕ್ಷ್ಯಗಳನ್ನು ಆರ್ಡರ್ ಮಾಡಿ, ecatering.irctc.co.in ಭೇಟಿ ನೀಡಿ ಅಥವಾ 1323 ಗೆ ಕರೆ ಮಾಡಿ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
Koo AppDuring the auspicious festival of Navratri, IR brings to you a special menu to satiate your Vrat cravings, being served from 26.09.22 - 05.10.22. Order the Navratri delicacies for your train journey from 'Food on Track' app, visit ecatering.irctc.co.in or call on 1323.
View attached media content