ಡೆಂಗ್ಯೂ ಬಂದಾಗ ಮಾತ್ರವಲ್ಲ ಇನ್ನಿತರ ಆರೋಗ್ಯ ಸಮಸ್ಯೆಯಿಂದಲೂ ಕೆಲವರಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವುದು. ಕೆಲವರಿಗೆ ಜ್ವರ ಬಂದಾಗಲೂ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವುದು.
ಪ್ಲೇಟ್‌ಲೆಟ್‌ಗಳು ಮೂಳೆ ಮಜ್ಜೆ ಹರಡಿರುವುದು. ನಮಗೆ ಗಾಯವಾದಾಗ ರಕ್ತವನ್ನು ಹೆಪ್ಪುಗಟ್ಟುವಂತೆ ಮಾಡುವುದೇ ಈ ಪ್ಲೇಟ್‌ಲೆಟ್‌ಗಳು. ದೇಹದಲ್ಲಿ ಒಂದು ಚಿಕ್ಕ ಗಾಯಾವಾದಾಗ ರಕ್ತ ಸೋರಲಾರಂಭಿಸುತ್ತದೆ, ಸ್ವಲ್ಪ ಹೊತ್ತಿಗೆ ರಕ್ತ ಸೋರಿಕೆ ನಿಲ್ಲುತ್ತದೆ, ಪ್ಲೇಟ್‌ಗಳು ರಕ್ತಸೋರಿಕೆಯಿಂದಾಗಿ ಸಾವು ಸಂಭವಿಸುವುದನ್ನು ತಡೆಗಟ್ಟುತ್ತೆ.
ಆರೋಗ್ಯಕರ ಮನುಷ್ಯರಲ್ಲಿ ಪ್ಲೇಟ್‌ಲೆಟ್ಗಳ ಸಂಕ್ಯೆ ಒಂದು ಲಕ್ಷಕ್ಕಿಂತ ಅಧಿಕವಿರುತ್ತದೆ, ಅದೇ ಆರೋಗ್ಯ ಸಮಸ್ಯೆ ಕಾಣಿಸಿದಾಗ ಪ್ಲೇಟ್‌ಲೆಟ್‌ಗಳ ಸಮಸ್ಯೆ ಕಡಿಮೆಯಾಗುವುದು. ಪ್ಲೇಟ್‌ಲೆಟ್‌ಗಳ ಸಂಖ್ಯೆ 40,000ಕ್ಕಿಂತ ಕಡಿಮೆಯಾದರೆ ಅಪಾಯಾರಿ. ಅದರಲ್ಲೂ 20,000ಕ್ಕಿಂತ ಕಡಿಮೆಯಾದರೆ ತುಂಬಾನೇ ಅಪಾಯಕಾರಿ.
ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾದಾಗ ಯಾವ ಬಗೆಯ ಆಹಾರ ಸೇವನೆ ಪ್ಲೇಟ್‌ಲೆಟ್‌ಗಳ ಸಂಖ್ಯೆ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ನೋಡೋಣ ಬನ್ನಿ:
ಪ್ಲೇಟ್‌ಲೆಟ್‌ಗಳ ಸಂಖ್ಯೆ ಹೆಚ್ಚಲು ದೇಹಕ್ಕೆ ವಿಟಮಿನ್ ಬಿ 12 ತುಂಬಾನೇ ಮುಖ್ಯ. ವಿಟಮಿನ್ ಬಿ 12 ನಮ್ಮ ರಕ್ತಕಣಗಳನ್ನು ಆರೋಗ್ಯಕರವಾಗಿಡುವಲ್ಲಿ ತುಂಬಾನೇ ಪ್ರಮುಖ ಪಾತ್ರವಹಿಸುತ್ತದೆ.
1. ವಿಟಮಿನ್ ಬಿ 12 ಇರುವ ಆಹಾರಗಳು
ಮೊಟ್ಟೆ,
ಲಿವರ್,
ಸಮುದ್ರಾಹಾರಗಳು
ಚೀಸ್
ಮಾಂಸಾಹಾರ
2. ವಿಟಮಿನ್ ಸಿ ಇರವ ಆಹಾರಗಳು ಪ್ಲೇಟ್‌ಲೆಟ್ ಕೌಂಟ್ ಹೆಚ್ಚಿಸುತ್ತೆ
* ಬ್ರೊಕೋಲಿ
* ಹಸಿರು ಹಾಗೂ ಕೆಂಪಗಿನ ದುಂಡು ಮೆಣಸು
* ಕಿತ್ತಳೆ, ಗ್ರೇಪ್‌ಫ್ರೂಟ್
* ಕಿವಿಫ್ರೂಟ್
* ಸ್ಟ್ರಾಬೆರ್ರಿ
3. ವಿಟಮಿನ್ ಡಿ ಅಧಿಕವಿರುವ ಆಹಾರಗಳು ಕೂಡ ಪ್ಲೇಟ್‌ಲೆಟ್ ಕೌಂಟ್ ಹೆಚ್ಚಿಸುತ್ತೆ
*ಮೊಟ್ಟೆಯ ಹಳದಿ
* ಆಯ್ಲಿ ಫಿಶ್ ಅಂದರೆ ಸಾಲಮೋನ್, ತುನಾ, ಬೂತಾಯಿ
4. ಪಪ್ಪಾಯಿ ಎಲೆ ಅಥವಾ ಪಪ್ಪಾಯಿ ಬೀಜ
ಪ್ಲೇಟ್‌ಲೆಟ್ ತುಂಬಾ ಕಡಿಮೆಯಾದಾಗ ಪ್ಲೇಟ್‌ಲೆಟ್ ಹೆಚ್ಚಿಸಲು ಪಪ್ಪಾಯಿ ಎಲೆ ತುಂಬಾನೇ ಸಹಕಾರಿ. ಅದರ ಕುಡಿ ಎಲೆಯ ರಸ ಹಿಂಡಿ ಅರ್ಧ ಚಮಚ ಕುಡಿದರೆಸಾಕು ಪ್ಲೇಟ್‌ಲೆಟ್ ಕೌಂಟ್ ಹೆಚ್ಚುವುದು. ಆದರೆ ಪಪ್ಪಾಯಿ ಎಲೆಯ ರಸ ತುಂಬಾ ಸೇವಿಸಬೇಡಿ, ಬೇಧಿಯಾಗುವುದು, ವೈದ್ಯರ ಸಲಹೆ ಕೇಳಿ ಈ ರಸ ತೆಗೆದುಕೊಳ್ಳಿ.
ಪಪ್ಪಾಯಿ ಬೀಜ ಕೂಡ ಪ್ಲೇಟ್‌ಲೆಟ್ ಕೌಂಟ್ ಹೆಚ್ಚಿಸುತ್ತೆ. ಇದನ್ನು ಕೂಡ ಅಷ್ಟೇ ಮಿತಿಯಲ್ಲಿ ಸೇವಿಸಿ.
4. ಅಮೃತಬಳ್ಳಿ
ಅಮೃತಬಳ್ಳಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ, ಇದು ಪ್ಲೇಟ್‌ಲೆಟ್ ಕೌಂಟ್ ಕೂಡ ಹೆಚ್ಚಿಸುತ್ತೆ. ಅಮೃತ ಬಳ್ಳಿ ರಕ್ತವನ್ನು ಶುದ್ಧೀಕರಿಸುವ ಕೆಲಸವನ್ನೂ ಮಾಡುತ್ತೆ.
5. ಬೆರ್ರಿ ಹಣ್ಣುಗಳು
ಬೆರ್ರಿ ಹಣ್ಣುಗಳು ಹಾಗೂ ಕಿವಿ ಫ್ರೂಟ್ ಪ್ಲೇಟ್‌ಲೆಟ್ ಹೆಚ್ಚಿಸುವಲ್ಲಿ ಸಹಕಾರಿ. ದೇಹದಲ್ಲಿ ಪ್ಲೇಟ್‌ಲೆಟ್ ಕಡಿಮೆಯಾದರೆ ಬೆರ್ರ್ಇ ಹಣ್ಣುಗಳನ್ನು ಸೇವಿಸಿ, ದಿನದಲ್ಲಿ 3-4 ಕಿವಿ ಫ್ರೂಟ್ ಹಣ್ಣುಗಳನ್ನು ಸೇವಿಸಿ.