ಪೆರ್ಲ: ಮಣಿಯಂಪಾರೆ ಶ್ರೀದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಭಜನಾ ಕಾರ್ಯಕ್ರಮ ದಿನಂಪ್ರತಿ ರಾತ್ರಿ ಜರಗುತ್ತಿದೆ.
ಚಂದ್ರಶೇಖರ ನಾವಡ ಬಜಕೂಡ್ಲು ಅವರ ನೇತೃತ್ವದಲ್ಲಿ ಗಣಪತಿ ಹವನ ಹಾಗೂ ಶ್ರೀದೇವಿಯ ಬಿಂಬದ ಶುದ್ಧಿ ಕಲಶದೊಂದಿಗೆ ನವರಾತ್ರಿ ಭಜನೋತ್ಸವಕ್ಕೆ ಚಾಲನೆ ನೀಡಲಾಯಿತು. ಒ.2ರಂದು ಬೆಳಿಗ್ಗೆ 8 ರಿಂದ ವಿಶೇಷ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಒ.4ಕ್ಕೆ ಸಂಜೆ 6 ಕ್ಕೆ ದುರ್ಗಾ ನಮಸ್ಕಾರ ಪೂಜೆ ಹಾಗೂ ರಾತ್ರಿ 7 ಕ್ಕೆ ಆಯುಧ ಪೂಜೆ ನಡೆಯಲಿದೆ. ದಿನಂಪ್ರತಿ ನೂರಾರು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಅನ್ನ ಸಂತರ್ಪಣೆ ಜರಗುತ್ತಿದೆ.
ಮಣಿಯಂಪಾರೆ ಶ್ರೀದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ನವರಾತ್ರಿ ವಿಶೇಷ ಭಜನೆ
0
ಸೆಪ್ಟೆಂಬರ್ 29, 2022
Tags