ನವದೆಹಲಿ: ರೇಬೀಸ್ ವಿರುದ್ದ ನೀಡಲಾಗುವ ಚುಚ್ಚುಮದ್ದಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಡ್ರಗ್ಸ್ ಕಂಟ್ರೋಲರ್ ಜನರಲ್ ಅವರಿಂದ ವರದಿ ಕೇಳಿದೆ.
ವ್ಯಾಕ್ಸಿನೇಷನ್ ಮಾಡಿದ ನಂತರವೂ ರೇಬೀಸ್ ನಿಂದ ಪುನರಾವರ್ತಿತ ಸಾವಿನ ಪ್ರಕರಣಗಳ ಹಿನ್ನೆಲೆಯಲ್ಲಿ ಕೇಂದ್ರ ವರದಿ ಅಪೇಕ್ಷಿಸಿದೆ. ಇದಲ್ಲದೇ ಪರಿಸ್ಥಿತಿಯನ್ನು ಅವಲೋಕಿಸಲು ಆರೋಗ್ಯ ಸಚಿವಾಲಯವು ಕೇಂದ್ರ ತಂಡವನ್ನು ಕೇರಳಕ್ಕೆ ಕಳುಹಿಸಿದೆ.
ಇತ್ತೀಚೆಗμÉ್ಟೀ 12 ವರ್ಷದ ಬಾಲಕಿಯೊಬ್ಬಳು ಬೀದಿ ನಾಯಿ ಕಚ್ಚಿ ಸಾವನ್ನಪ್ಪಿದ್ದಳು. ಇದರ ಬೆನ್ನಲ್ಲೇ ಲಸಿಕೆ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿ ಕೇರಳ ಕೇಂದ್ರಕ್ಕೆ ಪತ್ರ ಬರೆದಿತ್ತು. ಇದರ ಬೆನ್ನಲ್ಲೇ ಡಿಸಿಜಿಐನಿಂದ ವರದಿ ಕೇಳಲಾಗಿತ್ತು. ಲಸಿಕೆಗಳನ್ನು ಕೌಸ್ಲಿಯ ಕೇಂದ್ರ ಔಷಧ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುವುದು. ಇದರ ನಂತರವೇ, ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಅಂತಿಮ ಮಾಹಿತಿ ಲಭ್ಯವಾಗುತ್ತದೆ. ಲಸಿಕೆ ನಿಷ್ಪರಿಣಾಮಕಾರಿ ಎಂದು ಈಗ ಹೇಳಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದೆ.
ಈ ನಡುವೆ ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ. ರಾಜ್ಯದಲ್ಲಿ ಪ್ರತಿನಿತ್ಯ 50ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಯುತ್ತಿದೆ. ದಾಳಿಯ ತೀವ್ರತೆ ಇμÁ್ಟದರೂ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.
ರೇಬೀಸ್ ವಿರುದ್ದದ ಚುಚ್ಚುಮದ್ದಿನ ಗುಣಮಟ್ಟದ ಬಗ್ಗೆ ವರದಿ ಕೇಳಿದ ಕೇಂದ್ರ; ವಿಶೇಷ ತಂಡ ಕೇರಳಕ್ಕೆ ರವಾನೆ
0
ಸೆಪ್ಟೆಂಬರ್ 13, 2022