ಕೊಲ್ಲಂ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಡಾ.ಮೋಹನ್ ಭಾಗವತ್ ಅವರು ಅಮೃತಾನಂದಮಯಿ ಮಠಕ್ಕೆ ನಿನ್ನೆ ತಲುಪಿರುವÀರು. ಈ ಯಾತ್ರೆಯು ಪ್ರತಿ ವರ್ಷ ರಾಜ್ಯ ಮಟ್ಟದಲ್ಲಿ ನಡೆಯುವ ಅಧಿಕೃತ ಯಾತ್ರೆಯ ಭಾಗವಾಗಿದೆ.
ನಿನ್ನೆ ಮಾತಾ ಅಮೃತಾನಂದಮಯಿ ಅವರನ್ನು ಭೇಟಿಯಾಗಲು ಡಾ.ಮೋಹನ್ ಭಾಗವತ್ ಅವರು ವಲ್ಲಿಕ್ಕಾವಿಗೆ ಆಗಮಿಸಿದರು. ಮೋಹನ್ ಭಾಗವತ್ ಅವರನ್ನು ಮಠದ ಶ್ರೀಗಳು ಹಾಗೂ ಅಮೃತಾನಂದಮಯಿ ಅವರ ಶಿಷ್ಯರು ಬರಮಾಡಿಕೊಂಡರು. ಮೋಹನ್ ಭಾಗವತ್ ಅವರು ನಿನ್ನೆ ಮಧ್ಯಾಹ್ನ ತಿರುವನಂತಪುರ ವಿಮಾನ ನಿಲ್ದಾಣ ತಲುಪಿದರು. ನಂತರ ರಸ್ತೆಯ ಮೂಲಕ ಕೊಲ್ಲಂ ಜಿಲ್ಲೆಯ ವಲ್ಲಿಕಾವ್ ಅಮೃತಾನಂದಮಯಿ ಮಠಕ್ಕೆ ಆಗಮಿಸಿದರು. ಸರಸಂಘ ಚಾಲಕರು ಮಾತಾ ಅಮೃತಾನಂದಮಯೀ ಅವರೊಂದಿಗೆ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿ ಆಶೀರ್ವಾದ ಪಡೆದು ಆರು ಗಂಟೆಗೆ ಮರಳಿದರು.
ಡಾ. ಮೋಹನ್ ಭಾಗವತ್ ಅವರು ಪ್ರತಿ ವರ್ಷ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಆಯಾ ಪ್ರದೇಶದ ಆಧ್ಯಾತ್ಮಿಕ ಗುರುಗಳನ್ನು ಭೇಟಿ ಮಾಡುವುದು ವಾಡಿಕೆಯ ಪದ್ದತಿಯಾಗಿದೆ. ಭಾರತದಾದ್ಯಂತ ಇರುವ ಆಧ್ಯಾತ್ಮಿಕ ಗುರುಗಳ ಅಭಿಪ್ರಾಯಗಳು ಮತ್ತು ಸಲಹೆಗಳು ಹಿಂದೂ ಸಂಘಟನಾ ಕಾರ್ಯಕ್ಕೆ ದೊಡ್ಡ ಆಸ್ತಿ ಮತ್ತು ಭಾರತದ ಆಧ್ಯಾತ್ಮಿಕ ಉನ್ನತಿಗೆ ಅತ್ಯಗತ್ಯ ಎಂದು ಸರಸಂಘ ಚಾಲಕ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಕುಂಭಮೇಳಕ್ಕೂ ಮುನ್ನ ಹರಿದ್ವಾರದಲ್ಲಿ ನಡೆದ ಆಧ್ಯಾತ್ಮಿಕ ಗುರುಗಳ ಸಮಾವೇಶದಲ್ಲಿ ಮೋಹನ್ ಭಾಗವತ್ ಭಾಗವಹಿಸಿದ್ದರು.
ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಸರಸಂಘ ಚಾಲಕ್ ಕೇರಳಕ್ಕೆ ಆಗಮಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಕಾರ್ಯಕರ್ತರ ಸಭೆಗಳಲ್ಲಿ ಅವರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಆರ್ ಎಸ್ ಎಸ್ ನಾಯಕತ್ವ ಮಾಹಿತಿ ನೀಡಿದೆ. 16, 17 ಮತ್ತು 18 ರಂದು ತ್ರಿಶೂರ್ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. 16 ರಂದು ಬೆಳಗ್ಗೆ 8 ಗಂಟೆಗೆ ತ್ರಿಶೂರ್ ಶಂಕರ ಮಠಕ್ಕೆ ತೆರಳುವರು. ಮೋಹನ್ ಭಾಗವತ್ ಅವರು ತ್ರಿಶೂರ್‍ನಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಭೇಟಿಯಾಗಲಿದ್ದಾರೆ. 18ರಂದು ಬೆಳಗ್ಗೆಯಿಂದ ಗುರುವಾಯೂರು ರಾಧೇಯಂ ಸಭಾಂಗಣದಲ್ಲಿ ಆರ್‍ಎಸ್‍ಎಸ್ ಬೈಠಕ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಸಂಜೆ 5 ಗಂಟೆಗೆ ಗುರುವಾಯೂರು ಶ್ರೀಕೃಷ್ಣ ಕಾಲೇಜು ಮೈದಾನದಲ್ಲಿ ಗುರುವಾಯೂರು ಸಂಘದ ಜಿಲ್ಲಾ ಪೂರ್ಣವೇಷಧಾರಿ ಕಾರ್ಯಕರ್ತರ ಸಾಂಘಿಕ್‍ನಲ್ಲಿ ಮಾತನಾಡಲಿದ್ದಾರೆ.
ಆರ್‍ಎಸ್‍ಎಸ್ ಕ್ಷೇತ್ರೀಯ ಪ್ರಚಾರಕ ಎ. ಸೆಂಥಿಲ್ ಕುಮಾರ್, ಕ್ಷೇತ್ರೀಯ ಸೇವಾಪ್ರಮುಖ ಕೆ. ಪದ್ಮಕುಮಾರ್, ಪ್ರಾಂತ ಕಾರ್ಯವಾಹ ಪಿ.ಎನ್. ಈಶ್ವರನ್, ಪ್ರಾಂತಪ್ರಚಾರಕ್ ಎಸ್. ಸುದರ್ಶನನ್, ಅಖಿಲ ಭಾರತ ವಿಶೇಷ ಸಂಪರ್ಕ ಸದಸ್ಯ ಎ. ಜಯಕುಮಾರ್ ಕೂಡ ಜೊತೆಗಿದ್ದರು.
ಅಮೃತಾನಂದಮಯಿ ಮಠಕ್ಕೆ ಆರ್.ಎಸ್.ಎಸ್. ಸರಸಂಘ ಚಾಲಕ್ ಭೇಟಿ: ನಾಲ್ಕು ದಿನಗಳ ಕಾಲ ಕೇರಳ ಭೇಟಿಯಲ್ಲಿ ಡಾ.ಮೋಹನ್ ಭಾಗವತ್
0
ಸೆಪ್ಟೆಂಬರ್ 15, 2022
Tags