ಮಧೂರು: ಪುನರ್ ನವೀಕರಣ ಭರದಿಂದ ಸಾಗುತ್ತಿರುವ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾಗಿರುವ, ಪ್ರಥಮ ಪೂಜಿತ ಮಧೂರು ಶ್ರೀಸಿದ್ದಿವಿನಾಯಕ ಮಹಾಗಣಪತಿ ದೇವಾಲಯದಲ್ಲಿ ಭಾನುವಾರ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಭಕ್ತರ ಒಂದು ತಂಡ ಆಗಮಿಸಿ ಸ್ವಯಂಪ್ರೇರಿತವಾಗಿ ಒಂದು ದಿನದ ಶ್ರಮದಾನ ನಡೆಸಿ ಕೃತಾರ್ಥರಾದರು.
ಶ್ರಮದಾನದ ಮೊದಲು ಸಾಮೂಹಿಕ ಪ್ರಾರ್ಥನೆ ನಡೆಯಿತು. ತಂಡದಲ್ಲಿ ಕಿರಣ್ ಪುತ್ತೂರು, ಗಿರೀಶ್, ಸುಧೀರ್, ರಕ್ಷಿತ್, ಕೃಷ್ಣಪ್ಪ, ಮುರಳಿ, ವೇಣುಗೋಪಾಲ, ವಸಂತ, ಗಣೇಶ, ದಿವಾಕರ, ಉಮೇಶ, ಗೋಪಾಲ ನ್ಯಾಕ್, ಭವಾನಿಶಂಕರ್, ಸಚಿನ್, ಪ್ರವೀಣ್ ಆಚಾರ್ಯ, ಸಹನ, ಕೃಷ್ಣ, ಸತೀಶ್ ಆಚಾರ್ಯ ಸಹಿತ ಮಹಾಲಿಂಗೇರ್ಶವರ ದೇವಸ್ಥಾನದ ನಿತ್ಯ ಕರಸೇವಕರು ಉಪಸ್ಥಿತರಿದ್ದು ಶ್ರಮದಾನ ನಡೆಸಿದರು. ಮಧೂರು ಸನನಿಧಿಯ ಜೀರ್ಣೋದ್ದಾರ-ಪುನರ್ ನವೀಕರಣ ಸಮಿತಿ ಕಾರ್ಯದರ್ಶಿ ಜಯದೇವ ಖಂಡಿಗೆ, ಸಮಿತಿ ಪದಾಧಿಕಾರಿಗಳು, ಪ್ರಧಾನ ಅರ್ಚಕರು ಉಪಸ್ಥಿತರಿದ್ದರು.