ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್ ಓಣಂ ಆಚರಣೆಯ ಸಂಭ್ರಮದಲ್ಲಿ ಮಿಂದೆದ್ದಿತು. ವಿದ್ಯಾರ್ಥಿಗಳು, ಪ್ರಾಚಾರ್ಯರು ಮತ್ತು ಸಿಬ್ಬಂದಿ ಒಟ್ಟಾಗಿ ಓಣಂ ಹಬ್ಬವನ್ನು ಆಚರಿಸಿಕೊಂಡರು. ಕ್ಯಾಂಪಸ್‍ನ ವಿವೇಕಾನಂದ ವೃತ್ತದ ಆವರಣದಲ್ಲಿ ವಿವಿಧ ಕಲಾ ಮತ್ತು ಕ್ರೀಡಾ ಸ್ಪರ್ಧೆಗಳೊಂದಿಗೆ ಆರಂಭಗೊಂಡ ಓಣಂ ಆಚರಣೆಯನ್ನು ಉಪಕುಲಪತಿ ಪೆÇ್ರ.ಎಚ್.ವೆಂಕಟೇಶ್ವರಲು ಉದ್ಘಾಟಿಸಿದರು. ರಿಜಿಸ್ಟ್ರಾರ್ ಡಾ.ಎಂ. ಮುರಳೀಧರನ್‍ನಂಬಿಯಾರ್, ಹಣಕಾಸು ಅಧಿಕಾರಿ ಡಾ.ಜೋಜೋ ಕೆ. ಜೋಸೆಫ್, ಪ್ರಭಾರ ಪರೀಕ್ಷಾ ನಿಯಂತ್ರಕ ಪೆÇ್ರ.ಎಂ.ಎನ್. ಮುಸ್ತಫಾ, ಡೀನ್ ಅಕಾಡೆಮಿಕ್ ಪೆÇ್ರ.ಅಮೃತ್ ಜಿ ಕುಮಾರ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ.ಕೆ. ಅರುಣ್ ಕುಮಾರ್ ಉಪಸ್ಥಿತರಿದ್ದರು. ಹೂವಿನ ರಂಗೋಲಿ ಸ್ಪರ್ಧೆ, ಓಣತಳ್ಳ್, ಟಗರಿನ ಕಾಳಗ, ಸಂಗೀತ ಕುರ್ಚಿ ಆಟ, ಸುಣ್ಣದ ಓಟ ಹಾಗೂ ತಿರುವಾದಿರ ಕಳಿ ನಡೆಯಿತು. ವಿವಿಧ ಇಲಾಖೆಗಳ ನೇತೃತ್ವದಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು.
ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಸಂಭ್ರಮದ ಓಣಂ ಆಚರಣೆ
0
ಸೆಪ್ಟೆಂಬರ್ 04, 2022
Tags