ತಿರುವನಂತಪುರ: ಕೆಎಸ್‍ಆರ್‍ಟಿಸಿ ನೌಕರರಿಗೆ ತರಗತಿ ನಡೆಸಲು ಚಿಂತನೆ ನಡೆದಿದೆ. ಉದ್ಯೋಗಿಗಳಿಗೆ ಉತ್ತಮ ನಡವಳಿಕೆ ಕಲಿಸಲು 1 ಕೋಟಿ ರೂ.ಗಳ ತರಬೇತಿ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗುತ್ತಿದೆ. ಮೊದಲ ಹಂತದಲ್ಲಿ 10,000 ಮುಂಚೂಣಿಯ ಪ್ರಯಾಣಿಕರ ನಿರ್ವಹಣಾ ಸಿಬ್ಬಂದಿಗೆ ತರಬೇತಿ ನೀಡಲಾಗುವುದು.
ನಿರ್ವಹಣಾ ಸಂಶೋಧನಾ ಸಂಸ್ಥೆಗಳ ನೆರವಿನೊಂದಿಗೆ ಜಿಲ್ಲಾ ಮಟ್ಟದಲ್ಲಿ ವರ್ತನೆಯ ಬದಲಾವಣೆ ತರಗತಿಗಳನ್ನು ಜಾರಿಗೊಳಿಸಲಾಗುವುದು. ವಿವಿಧ ತರಬೇತಿಗಾಗಿ ಒಂದು ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ಮೊದಲ ಬಾರಿಗೆ ಕೆಎಸ್‍ಆರ್‍ಟಿಸಿಯಲ್ಲಿ ಮಾನವ ಸಂಪನ್ಮೂಲ ವಿಭಾಗವನ್ನು ರಚಿಸಲಾಯಿತು. ಬಳಿಕ ನಿರ್ವಹಣಾ ಮಟ್ಟದ ಸಿಬ್ಬಂದಿಗೆ ತರಬೇತಿ ನೀಡಲಾಗುವುದು.
ಕಾಟಾಕ್ಕಡದಲ್ಲಿ ರಿಯಾಯ್ತಿ ಟಿಕೆಟ್ ನವೀಕರಣಕ್ಕೆ ಆಗಮಿಸಿದ್ದ ತಂದೆ ಮತ್ತು ಪುತ್ರಿಗೆ ಕೆಎಸ್‍ಆರ್‍ಟಿಸಿ ನೌಕರರು ಥಳಿಸಿದ ಹಿನ್ನೆಲೆಯಲ್ಲಿ, ಕೂಡಲೇ ನೌಕರರಿಗೆ ಹೆಚ್ಚಿನ ತರಬೇತಿ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಗ್ರಾಹಕರೇ ಮುಖ್ಯ, ಅವರಿಗೆ ಸೇವೆ ಸಲ್ಲಿಸುವುದೇ ಮುಖ್ಯ ಎಂಬ ಮಹಾತ್ಮ ಗಾಂಧಿಯವರ ಮಾತುಗಳು ಗಾಂಧಿ ಜಯಂತಿಯಿಂದ ಪ್ರತಿ ಡಿಪೆÇೀಗಳಲ್ಲಿ ಪ್ರದರ್ಶನಗೊಳ್ಳಲಿವೆ.
ಬಸ್ ಮಾಹಿತಿ ಕೋರಿ ಬರುವವರ ಬಗ್ಗೆಯೂ ಪ್ರಚೋದನೆ ಇಲ್ಲದೇ ಸಿಬ್ಬಂದಿ ಕೆಟ್ಟದಾಗಿ ಪ್ರತಿಕ್ರಿಯಿಸುತ್ತಾರೆ ಎಂಬ ದೂರುಗಳು ಹಲವು ವರ್ಷಗಳಿಂದ ಇಲಾಖೆ ಮುಂದಿದೆ.
ಕೆ.ಎಸ್.ಆರ್.ಟಿ.ಸಿ. ನೌಕರರಿಗೆ ತರಬೇತಿ ತರಗತಿ: ವೆಚ್ಚ ``ಒಂದು ಕೋಟಿ''
0
ಸೆಪ್ಟೆಂಬರ್ 22, 2022