ಕೊಚ್ಚಿ: ಭಾರತ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‍ಎಸ್ ವಿಕ್ರಾಂತ್ ಅನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆ ದೇಶಕ್ಕೆ ಸಮರ್ಪಿಸಿದರು.
ಕೊಚ್ಚಿನ್ ಶಿಪ್‍ಯಾರ್ಡ್‍ನಲ್ಲಿ ನಡೆದ ಸಮಾರಂಭದಲ್ಲಿ ಅವರು ಹೆಚ್ಚು ಶಕ್ತಿಶಾಲಿ ಹಡಗನ್ನು ರಕ್ಷಣಾ ಪಡೆಗಳಿಗೆ ಅರ್ಪಿಸಿದರು. ಇದು ಭಾರತ ನಿರ್ಮಿಸಿದ ಮೊದಲ ವಿಮಾನವಾಹಕ ನೌಕೆಯೂ ಹೌದು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಶಿಪ್ಪಿಂಗ್ ಸಚಿವ ಸರ್ಬಾನಂದ ಸೋನೋವಾಲ್ ಅವರು ಐಎನ್‍ಎಸ್ ವಿಕ್ರಾಂತ್ ಕಾರ್ಯಾರಂಭದಲ್ಲಿ ಭಾಗವಹಿಸಿದ್ದರು.
ಬೆಳಗ್ಗೆ 9.30ರ ಸುಮಾರಿಗೆ ಕೊಚ್ಚಿನ್ ಶಿಪ್ ಯಾರ್ಡ್ ಗೆ ಆಗಮಿಸಿದ ಪ್ರಧಾನಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬರಮಾಡಿಕೊಂಡರು. ನೌಕಾಪಡೆಯು ಪ್ರಧಾನ ಮಂತ್ರಿಯವರಿಗೆ ಗಾರ್ಡ್ ಆಫ್ ಆನರ್ ನೀಡಿ ಗೌರವಿಸಿತು. ನಂತರ ಉದ್ಘಾಟನೆ ನಡೆವ ಸ್ಥಳಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಕೇರಳದ ಸಮುದ್ರ ತೀರವು ಭಾರತದ ಹೊಸ ಸೂರ್ಯೋದಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ವಿಕ್ರಾಂತ್ ನಮ್ಮ ಹೆಮ್ಮೆ. ಐಎನ್‍ಎಸ್ ವಿಕ್ರಾಂತ್ ಕೇವಲ ವಿಮಾನವಾಹಕ ನೌಕೆಯಷ್ಟೇ ಅಲ್ಲ. ಪ್ರಯತ್ನ ಮತ್ತು ಪರಿಶ್ರಮದ ಸಂಕೇತವಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಗಿದೆ. ಎμÉ್ಟೀ ಕಠಿಣ ಸವಾಲು ಬಂದರೂ ಬದುಕಬಹುದು ಎಂಬುದಕ್ಕೆ ವಿಕ್ರಾಂತರೇ ಸಾಕ್ಷಿ ಎಂದರು.
ವಿಕ್ರಾಂತ್ ವಿಶಾಲ ಮತ್ತು ವಿಶಿಷ್ಟ. ವಿಕ್ರಾಂತ್ ಮೂಲಕ ಭಾರತ ಪ್ರಪಂಚದ ಮುಂದೆ ತಲೆಯೆತ್ತಿ ನಿಂತಿದೆ. ಕೇವಲ ಭಾರತದಲ್ಲೇ ತಯಾರಿಸಿರುವುದಷ್ಟೇ ಅಲ್ಲ ಜಗತ್ತಿಗೆ ತಯಾರಿಸಿ ನೀಡುವುದು ಕೂಡಾ ಗುರಿಯಾಗಿದೆ ಎಂದು ಹೇಳಿದರು. ಸಮುದ್ರ ಭದ್ರತೆಗೆ ವಿಕ್ರಾಂತ್ ಭಾರತದ ಉತ್ತರವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ನೌಕಾಪಡೆ ಮುಖ್ಯಸ್ಥ ಹರಿಕುಮಾರ್ ಮಾತನಾಡಿ, ಆತ್ಮನಿರ್ಭರ ಭಾರತ್ ಮೂಲಕ ನೌಕಾಪಡೆಯು ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು. ವಿಕ್ರಾಂತ್ ಪೂರ್ಣಗೊಂಡಿರುವುದು ಇದರತ್ತ ಒಂದು ಹೆಜ್ಜೆ ಎಂದರು.
ನೌಕಾಪಡೆಯ ನೂತನ ಧ್ವಜವನ್ನೂ ಪ್ರಧಾನಿ ಈ ಸಂದರ್ಭ ಅನಾವರಣಗೊಳಿಸಿದರು. ನೌಕಾಪಡೆಗೆ ದೊರೆತಿರುವ ಹೊಸ ಧ್ವಜ ಹೆಮ್ಮೆಯ ಸಾಧನೆಯಾಗಿದೆ ಎಂದು ನೌಕಾಪಡೆ ಮುಖ್ಯಸ್ಥರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇದು ಸ್ವಾವಲಂಬನೆಯ ಸಂಕೇತವಾಗಿದೆ. ವಿಕ್ರಾಂತ್ ದೇಶಕ್ಕೆ ಆಸ್ತಿಯಾಗಲಿದೆ ಎಂದು ಅವರು ಹೇಳಿದರು.
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್, ದಕ್ಷಿಣ ನೇವಲ್ ಕಮಾಂಡ್ ಮುಖ್ಯಸ್ಥ ವೈಸ್ ಅಡ್ಮಿರಲ್ ಎಂಎ ಹಂಪಿಹೋಳಿ, ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್ ಸಿಎಂಡಿ ಮಧು ಎಸ್ ನಾಯರ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ವಿಶಾಲವಾದ, ವಿಸ್ಕøತ, ವಿಶಿಷ್ಟ: ಹೊಸ ಸೂರ್ಯೋದಯದ ಸಾಕ್ಷಿ: ಐ.ಎನ್.ಎಸ್. ವಿಕ್ರಾಂತ್ ದೇಶಕ್ಕೆ ಸಮರ್ಪಿಸಿ ಪ್ರಧಾನಮಂತ್ರಿ ಅಭಿಮತ
0
ಸೆಪ್ಟೆಂಬರ್ 11, 2022
Tags