ಬದಿಯಡ್ಕ: ಚಂಬಲ್ತಿಮಾರ್ ನಿವಾಸಿ ನಾರಾಯಣ ಸಿ.ಎಚ್. ಇವರು ಎರಡು ಕಿಡ್ನಿ ಕಳೆದುಕೊಂಡು ಹಲವು ತಿಂಗಳಗಳಿಂದ ಕೆಲಸಕ್ಕೆ ಹೋಗಲಾರದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇವರಿಗೆ ಕಿಡ್ನಿ ಮರುಜೋಡನೆಗೆ ಸುಮಾರು 45 ಲಕ್ಷ ಖರ್ಚು ಅಗತ್ಯವಿದ್ದು, ಇವರ ಸಹಾಯ ಹಸ್ತಕ್ಕೆ ನಾರಾಯಣ ಚಂಬಲ್ತಿಮಾರ್ ಚಿಕಿತ್ಸಾ ಸಹಾಯ ಸಮಿತಿಯನ್ನು ರಚಿಸಲಾಗಿದೆ. ಇವರಿಗೆ ಸಹಾಯ ಹಸ್ತವಾಗಿ ಜನ ಮೈತ್ರಿ ಪೋಲೀಸ್ ಬದಿಯಡ್ಕ ಘಟಕದಿಂದ ಹತ್ತು ಸಾವಿರ ರೂ.(10,000) ಚೆಕ್ಕನ್ನು ಸಮಿತಿಯ ಕೋಶಾಧಿಕಾರಿ ಪಿ.ಜಿ. ಜಗನ್ನಾಥ ರೈ ಹಸ್ತಾಂತರಿಸಿದರು. ಸಮಿತಿಯ ಸಂಚಾಲಕ ಸುಧಾಕರನ್ ವಿದ್ಯಾಗಿರಿ, ಪದಾಧಿಕಾರಿಗಳಾದ ಪದ್ಮನಾಭ ಶೆಟ್ಟಿ ವಳಮಲೆ, ರಾಮ ಮರಿಯಂಕೂಡ್ಲು, ಶಾಜಿ ವಿದ್ಯಾಗಿರಿ ಜೊತೆಗಿದ್ದರು.
ನಾರಾಯಣ ಸಿ ಎಚ್ ಚಿಕಿತ್ಸಾ ನಿಧಿಗೆ ಸಹಾಯ ಹಸ್ತಾಂತರ
0
ಸೆಪ್ಟೆಂಬರ್ 30, 2022