ಕಣ್ಣೂರು: ಗೃಹಿಣಿ ಸಹಿತ ಎಂಟು ಮಂದಿಗೆ ಬೀದಿನಾಯಿ ಕಚ್ಚದ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಮನೆಯ ಹಿತ್ತಲಲ್ಲಿ ನಿಂತಿದ್ದ ಮಹಿಳೆಯ ಮೇಲೆ ಮೊದಲು ನಾಯಿ ದಾಳಿ ನಡೆಸಿತು. ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ, ನಾಯಿ ಮಹಿಳೆಯ ಅಂಗೈಗೆ ಕಚ್ಚಿತು. ಅಲ್ಲದೆ ದಾಳಿಯಲ್ಲಿ ಆ ಪ್ರದೇಶದಲ್ಲಿದ್ದ ಎಂಟು ಮಂದಿಗೆ ಕಚ್ಚಿದೆ.
ಇದ್ದಕ್ಕಿದ್ದಂತೆ ನಾಯಿ ಬೊಗಳುತ್ತಾ ಹತ್ತಿರ ಬಂದಿತು. ವಿರೋಧಿಸದೇ ಇದ್ದಿದ್ದರೆ ಮುಖಕ್ಕೆ ಕಚ್ಚಿಕೊಳ್ಳುತ್ತಿತ್ತು. ಅಸಹನೀಯ ನೋವು ಅನುಭವಿಸುತ್ತಿದ್ದೇನೆ ಎಂದು ನಾಯಿ ಕಚ್ಚಿದ ಗೃಹಿಣಿ ಹೇಳಿದ್ದಾರೆ. ಇದೇ ವೇಳೆ, ಸಾಕು ಪ್ರಾಣಿಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ.
ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ದಿನ ತಿರುವನಂತಪುರದ ಕಾಟ್ಟಾಕಡ ಎಂಬಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ವರಿಗೆ ಬೀದಿ ನಾಯಿ ಕಚ್ಚಿತ್ತು. ಅಮಚಲ್ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರು ಮಕ್ಕಳು ಹಾಗೂ ಬಸ್ ನಿಂದ ಇಳಿದ ಮಗುವಿಗೆ ಕಚ್ಚಿದೆ. ಕಚ್ಚಿದ ನಂತರ ನಾಯಿ ಓಡಿಹೋಗಿ ಯುವತಿ ಮೇಲೆಯೂ ದಾಳಿ ಮಾಡಿದೆ.
ಆಲಂಗಾಡ್ ಪೋಲೀಸ್ ಠಾಣೆಯ ಎಸ್‍ಐ ರತೀಶ್ ಬಾಬು ಎರ್ನಾಕುಳಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಾಕು ನಾಯಿ ಕಚ್ಚಿದೆ. ಆಲುವಾದ ನೆಡುವನ್ನೂರಿನಲ್ಲಿ ನಾಯಿಯೊಂದು ಇಬ್ಬರಿಗೆ ಕಚ್ಚಿ ಸಾವನ್ನಪ್ಪಿದೆ.
ಹೆಚ್ಚುತ್ತಿರುವ ಬೀದಿನಾಯಿ ದಾಳಿ: ಕಣ್ಣೂರಿನಲ್ಲಿ ಎಂಟು ಮಂದಿಗೆ ಶ್ವಾನ ದಂಶನ
0
ಸೆಪ್ಟೆಂಬರ್ 08, 2022