ಮುಂಬೈ: ವೇದಾಂತ-ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಯೋಜನೆಯನ್ನು ಗುಜರಾತ್ ಕೈಗೆತ್ತಿಕೊಂಡಿರುವ ಬಗ್ಗೆ ತೀವ್ರ ಟೀಕೆಗೆ ಒಳಗಾಗಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Maharashtra Deputy Chief Minister Devendra Fadnavis ) ಅವರು ನೆರೆಯ ಗುಜರಾತ್, ಪಾಕಿಸ್ತಾನವಲ್ಲ.
ಅದು ನಮ್ಮ ಸಹೋದರ ರಾಜ್ಯ. ಇದು ಆರೋಗ್ಯಕರ ಸ್ಪರ್ಧೆ. ನಾವು ಕರ್ನಾಟಕಕ್ಕಿಂತ ಮುಂದೆ ಬರಲು ಬಯಸುತ್ತೇವೆ . ಹಿಂದಿನ ಮಹಾ ವಿಕಾಸ್ ಅಘಾಡಿ (ಎಂವಿಎ) ಸರಕಾರ ಈ ಯೋಜನೆ ಕೈತಪ್ಪಲು ಕಾರಣ ಎಂದು ಶುಕ್ರವಾರ ಆರೋಪಿಸಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರಕಾರ ಅಧಿಕಾರದಲ್ಲಿದ್ದಾಗ ಯಾವುದೇ ಸಬ್ಸಿಡಿ ಪಡೆಯಲು "ಹತ್ತು ಪ್ರತಿಶತ ಕಮಿಷನ್" ಪಾವತಿಸಬೇಕಾಗಿತ್ತು ಹಾಗೂ ಈ ಅವಧಿಯಲ್ಲಿ ಗುಜರಾತ್ ನಮಗಿಂತ ಮುಂದಕ್ಕೆ ಸಾಗಿತು ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಠಾಕ್ರೆ ನೇತೃತ್ವದ ಶಿವಸೇನೆಯನ್ನು ಹೆಸರಿಸದೆ, ದೇವೇಂದ್ರ ಫಡ್ನವೀಸ್ ಅವರು ರತ್ನಗಿರಿ ಮತ್ತು ಪಾಲ್ಘರ್‌ನ ವಧವನ್ ಬಂದರಿನ ಸಂಸ್ಕರಣಾಗಾರದಂತಹ ದೊಡ್ಡ ಯೋಜನೆಗಳನ್ನು ವಿರೋಧಿಸಿದ್ದಕ್ಕಾಗಿ ಮತ್ತು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಮತ್ತು ಮುಂಬೈ ಮೆಟ್ರೋ ಹಂತ 3 ಅನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಆ ಪಕ್ಷವನ್ನು ಗುರಿಯಾಗಿಸಿದರು.
ನಾವು ಅಧಿಕಾರಕ್ಕೆ ಬರುವ ಮುನ್ನವೇ ನಿರ್ಧಾರ ಕೈಗೊಳ್ಳಲಾಗಿದೆ. ನಾವು ಅಧಿಕಾರಕ್ಕೆ ಬಂದಾಗ, ನಾವು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ಏನನ್ನೂ ಮಾಡದ ಜನರು ನಮ್ಮತ್ತ ಬೆರಳು ತೋರಿಸುತ್ತಿದ್ದಾರೆ ಎಂದು ಫಡ್ನವೀಸ್ ಹೇಳಿದರು.
ಎಂವಿಎ ಅಧಿಕಾರಾವಧಿಯಲ್ಲಿ ವಿದೇಶಿ ಹೂಡಿಕೆ ಆಕರ್ಷಿಸುವಲ್ಲಿ ಮಹಾರಾಷ್ಟ್ರ ಗುಜರಾತ್‌ಗಿಂತ ಹಿಂದೆ ಬಿದ್ದಿತು. ಆದರೆ ಇನ್ನೆರಡು ವರ್ಷಗಳಲ್ಲಿ ಈಗಿನ ಸರಕಾರವು ಮಹಾರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯಲಿದೆ ಎಂದು ದೇವೇಂದ್ರ ಫಡ್ನವಿಸ್ ಹೇಳಿದರು.