ನವದೆಹಲಿ:ವಿಶ್ವಪ್ರಸಿದ್ಧ ಪ್ರೇಮ ಸ್ಮಾರಕವಾದ ತಾಜ್‌ಮಹಲ್‌ಗೆ(Tajmahal) ತೇಜೋ ಮಹಾಲಯ ಎಂದು ಮರುನಾಮಕರಣ ಮಾಡುವ ಕುರಿತು ಬಿಜೆಪಿ ಕೌನ್ಸಿಲರ್ ಮಂಡಿಸಿದ ಪ್ರಸ್ತಾವವನ್ನು ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್(Agra muncipal corporation) ಚರ್ಚಿಸುವ ನಿರೀಕ್ಷೆಯಿದೆ.
ಬಿಜೆಪಿ ಕೌನ್ಸಿಲರ್ ಶೋಭರಾಮ್ ರಾಥೋಡ್ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಬುಧವಾರ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಮುಂದೆ ಚರ್ಚೆ ಮತ್ತು ಹೆಚ್ಚಿನ ಪರಿಗಣನೆಗೆ ಮಂಡಿಸಲಾಗುವುದು ಎಂದು ವರದಿಗಳು ತಿಳಿಸಿವೆ.
ಪ್ರಸ್ತಾವವಯನ್ನು ಮಂಡಿಸಿದ ನಂತರ, ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಸದಸ್ಯರು ಈ ನಿಟ್ಟಿನಲ್ಲಿ ಮುಂದಿನ ಪ್ರಕ್ರಿಯೆಗಳ ಕುರಿತು ಗಮನ ಹರಿಸಲಿದ್ದಾರೆ ಮತ್ತು ಇತರ ಎಲ್ಲ ಅಂಶಗಳನ್ನು ಪರಿಗಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊಘಲ್ ಚಕ್ರವರ್ತಿ ಷಹಜಹಾನ್(Shajahan) ಮತ್ತು ಅವರ ಪತ್ನಿ ಮುಮ್ತಾಝ್ ಮಹಲ್(Mumtaz Mahal) ಅವರ ರಾಜಮನೆತನದ ವಿಶ್ರಾಂತಿ ಸ್ಥಳವಾದ ತಾಜ್ ಮಹಲ್‌ನಲ್ಲಿ ಕಮಲದ ಕಲಶವಿದೆ ಎಂಬುದಕ್ಕೆ ತನ್ನ ಬಳಿ "ಪುರಾವೆ" ಇದೆ ಎಂದು ರಾಥೋರ್ ತನ್ನ ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ.ತಾಜ್ ಮಹಲ್‌ನಲ್ಲಿನ 22 ಬೀಗ ಹಾಕಿದ ಕೋಣೆಗಳ ಹಿಂದಿನ 'ಸತ್ಯವನ್ನು ಕಂಡುಕೊಳ್ಳಲು' ನಿರ್ದೇಶನವನ್ನು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಅಲಹಾಬಾದ್ ಉಚ್ಚ ನ್ಯಾಯಾಲಯವು ವಜಾಗೊಳಿಸಿದ ಹಲವಾರು ತಿಂಗಳ ನಂತರ ತಾಜ್ ಮಹಲ್ ಅನ್ನು ಮರುನಾಮಕರಣ ಮಾಡುವ ಪ್ರಸ್ತಾಪವು ಸ್ಮಾರಕದ ಮೂಲದ ಸುತ್ತಲಿನ ವಿವಾದವನ್ನು ಮತ್ತೊಮ್ಮೆ ಗರಿಗೆದರಿಸಿದೆ.
ತಾಜ್‌ಮಹಲ್ ಅನ್ನು ಮರುನಾಮಕರಣ ಮಾಡಬೇಕೆಂಬ ಬೇಡಿಕೆಗಳು ಬಂದಿರುವುದು ಇದೇ ಮೊದಲೇನಲ್ಲ. ಹಲವಾರು ಬಲಪಂಥೀಯ ಕಾರ್ಯಕರ್ತರು, ವಾಸ್ತವಕ್ಕೆ ದೂರವಾದ ASI ಸಂಶೋಧನೆಗಳು ಮತ್ತು ಪುರಾತನ ಗ್ರಂಥಗಳನ್ನು ಉಲ್ಲೇಖಿಸಿ, ತಾಜ್ ಮಹಲ್ ಶಿವನ ದೇವಾಲಯ ಎಂದು ಪ್ರತಿಪಾದಿಸಿದ್ದರು.
ಇತ್ತೀಚೆಗೆ, ಉತ್ತರ ಪ್ರದೇಶದ ಬಲ್ಲಿಯಾದಿಂದ ಭಾರತೀಯ ಜನತಾ ಪಕ್ಷದ ಶಾಸಕ ಸುರೇಂದ್ರ ಸಿಂಗ್ ಅವರು ಆಗ್ರಾದ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಅನ್ನು ಶೀಘ್ರದಲ್ಲೇ ಯೋಗಿ ಆದಿತ್ಯನಾಥ್ ಸರ್ಕಾರವು 'ರಾಮ್ ಮಹಲ್' ಎಂದು ಮರುನಾಮಕರಣ ಮಾಡಲಿದೆ ಎಂದು ಹೇಳಿದರು.