ಪಾಲಕ್ಕಾಡ್: ದೇಶಾದ್ಯಂತ ವಿವಿಧೆಡೆ ಗುರುವಾರ ಎನ್.ಐ.ಎ. ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಭಯೋತ್ಪಾದಕರು ರಾಜ್ಯದಲ್ಲಿ ವ್ಯಾಪಕ ಹಿಂಸಾಚಾರವನ್ನು ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧೆಡೆ ಕಾರ್ಯಕರ್ತರು ಸಂಚಾರ ತಡೆ ನಡೆಸಿದರು. ಘರ್ಷಣೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ನಗರಗಳಲ್ಲಿ ಹೆಚ್ಚಿನ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪಾಲಕ್ಕಾಡ್ ನ ಪಟ್ಟಾಂಬಿಯಲ್ಲಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಬೀದಿಗಿಳಿದು ಬೋಲೋ ತಕ್ಬೀರ್ ಘೋಷಣೆ ಕೂಗಿದರು. ಪೋಲೀಸರು ಲಾಠಿ ಬೀಸಿ ಅವರನ್ನು ಚದುರಿಸಿದರು. ಅನೇಕ ಜನರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ.
ಕಣ್ಣೂರಿನಲ್ಲಿ ಪಾಪ್ಯುಲರ್ ಫ್ರಂಟ್ ಬೋಲೋ ತಕ್ಬೀರ್ ಘೋಷಣೆ ಮೂಲಕ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿತು. ನಗರದ ಪೋಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದವರನ್ನು ಪೋಲೀಸರು ಬಂಧಿಸಿ ಟ್ರಾಫಿಕ್ ಜಾಮ್ ಬಗೆಹರಿಸಿದರು. ಇದೇ ವೇಳೆ ಪ್ರತಿಭಟನಕಾರರು ಪೋಲೀಸರೊಂದಿಗೆ ಘರ್ಷಣೆ ನಡೆಸಿದರು. ಪೋಲೀಸರು ಮತ್ತು ಪಾಪ್ಯುಲರ್ ಫ್ರಂಟ್ ಜೊತೆಗಿನ ಘರ್ಷಣೆಯಲ್ಲಿ ಪತ್ರಕರ್ತರೋರ್ವರು ಗಾಯಗೊಂಡಿದ್ದಾರೆ. ಪಾಪ್ಯುಲರ್ ಫ್ರಂಟ್ ಕಾಯಂಕುಳಂನಲ್ಲೂ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿತು. ಮಲಪ್ಪುರಂನಲ್ಲಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಪ್ರತಿಭಟನೆಯ ಹೆಸರಿನಲ್ಲಿ ಬಿಜೆಪಿ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಬಿಜೆಪಿಯ ಮಂಡಲ ಸಮಿತಿ ಕಚೇರಿ ಮೇಲೆ ದಾಳಿ ನಡೆದಿದೆ.
ಎನ್.ಐ.ಎ.ದಾಳಿ: ಪಾಪ್ಯುಲರ್‍ಫ್ರಂಟ್ ಕಾರ್ಯಕರ್ತರಿಂದ ಬೀದಿಗಿಳಿದು "ಬೋಲೋ ತಕ್ಬೀರ್" ಘೋಷಣೆ: ಭಯದ ವಾತಾವರಣ ಸೃಷ್ಟಿ
0
ಸೆಪ್ಟೆಂಬರ್ 22, 2022
Tags