ಕಾಸರಗೋಡು: ಕೆಲ್ಟ್ರಾನ್ ನಡೆಸುವ ಪತ್ರಿಕೋದ್ಯಮ ಕೋರ್ಸ್‍ಗೆ ಕೋಯಿಕ್ಕೋಡ್ ಕೇಂದ್ರದಲ್ಲಿ ಸ್ಪಾಟ್ ಅಡ್ಮಿಷನ್ ಮಾಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಸೆಪ್ಟೆಂಬರ್ 14, 15 ಮತ್ತು 16 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ತಮ್ಮ ಶೈಕ್ಷಣಿಕ ಅರ್ಹತೆಯನ್ನು ಸಾಬೀತುಪಡಿಸುವ ದಾಖಲೆಗಳೊಂದಿಗೆ ಕೋಯಿಕೋಡ್ ಕೇಂದ್ರವನ್ನು ತಲುಪಬೇಕು.
ಯಾವುದಾದರೂ ವಿಷಯದಲ್ಲಿ ಗಳಿಸಿದ ಪದವಿ ಯೋಗ್ಯತೆ ಯಾಗಿದೆ. ಪದವಿ ಫಲಿತಾಂಶಕ್ಕಾಗಿ ಕಾಯುತ್ತಿರುವವರನ್ನು ಪರಿಗಣಿಸಲಾಗುತ್ತದೆ. ಒಂದು ವರ್ಷದ ಕೋರ್ಸ್ ನಲ್ಲಿ ಟೆಲಿವಿಷನ್ ನ್ಯೂಸ್ ಚಾನೆಲ್‍ಗಳಲ್ಲಿ ಮತ್ತು ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ವಿಧ್ಯಾಭ್ಯಾಸ ದೊಂದಿಗೆ ತರಬೇತಿಯೂ, ಉದ್ಯೋಗವೂ ಲಭಿಸುವುದು. ಸುದ್ದಿ ಮಂಡನೆ, ಕಾರ್ಯಕ್ರಮ ನಿರೂಪಣೆ, ಮೊಬೈಲ್ ಪತ್ರಿಕೋದ್ಯಮ, ವೀಡಿಯೋ ಎಡಿಟಿಂಗ್ ಮತ್ತು ಕ್ಯಾಮರಾದಲ್ಲಿಯೂ ತರಬೇತಿ ನೀಡಲಾಗುತ್ತದೆ. ಫಲಿತಾಂಶಕ್ಕಾಗಿ ಕಾಯುತ್ತಿರುವವರೂ ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರಾಯ ಮಿತಿ 30 ವರ್ಷಗಳಾಗಿರುವುದಾಗಿ ಪ್ರಕಟಣೆ ತಿಳಿಸಿದೆ.
ಕೆಲ್ಟ್ರಾನ್‍ನಲ್ಲಿ ಪತ್ರಿಕೋದ್ಯಮ ಅಧ್ಯಯನಕ್ಕಾಗಿ ಸ್ಪಾಟ್ ಅಡ್ಮಿಷನ್
0
ಸೆಪ್ಟೆಂಬರ್ 14, 2022