ಕೊಲ್ಲಂ: ಜಪ್ತಿ ನೋಟಿಸ್ ಜಾರಿಯಾದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶೂರನಾಡಿನಲ್ಲಿ ನಡೆದಿದೆ. ಶೂರನಾಡು ದಕ್ಷಿಣದ ಅಜಿ ಭವನದ ಅಭಿರಾಮಿ (18) ಆತ್ಮಹತ್ಯೆ ಮಾಡಿಕೊಂಡವಳು. ನಿನ್ನೆ ಸಂಜೆ ವೇಳೆ ಘಟನೆ ನಡೆದಿದೆ.
ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಕೇರಳ ಬ್ಯಾಂಕ್ ಮನೆ ಮುಂದೆ ಜಪ್ತಿ ನೋಟಿಸ್ ಹಾಕಿತ್ತು. ಇದರ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅಭಿರಾಮಿ ಸಂಜೆ ಕಾಲೇಜಿನಿಂದ ಬಂದು ಬೆಡ್ ರೂಂ ಪ್ರವೇಶಿಸಿ ಬಾಗಿಲು ಹಾಕಿಕೊಂಡಿದ್ದರು. ಬಹಳ ಸಮಯದ ನಂತರ ಬಾಲಕಿ ಕಾಣದಿದ್ದು, ಬಾಗಿಲು ತೆರೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದರು. ಅಭಿರಾಮಿ ಈರಮಲ್ಲಿಕರ ಶ್ರೀ ಅಯ್ಯಪ್ಪ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ.
ಮನೆಮುಂದೆ ಕೇರಳ ಬ್ಯಾಂಕ್ ನ ಜಪ್ತಿ ನೋಟೀಸ್: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
0
ಸೆಪ್ಟೆಂಬರ್ 20, 2022