ನವದೆಹಲಿ: ಭಾರತೀಯ ಗಡಿ ಭಧ್ರತಾ ಪಡೆ (BSF) ಪಶ್ಚಿಮ ಬಂಗಾಳದ ಮಾಲ್ದ ಜಿಲ್ಲೆಯ ಸಮೀಪ ಭಾರತ - ಬಾಂಗ್ಲಾದೇಶ ಗಡಿಯಲ್ಲಿ 39 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡಿದೆ.
ಬಿಎಸ್ಎಫ್ನ 70ನೇ ಸೌತ್ ಬೆಂಗಾಲ್ ಫ್ರಾಂಟಿಯರ್ ಬಟಾಲಿಯನ್ ದಕ್ಷಿಣ ಬಂಗಾಳದ ಸುಖದೇವಪರದ ಔಟ್ಪೋಸ್ಟ್ನಲ್ಲಿ ತಂಗಿತ್ತು.
ಈ ವೇಳೆ ಭಾರತ - ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ 359 ಮೊಬೈಲ್ಗಳನ್ನು ವಶಪಡಿಸಿಕೊಂಡಿದೆ.
ಬಿಎಸ್ಎಫ್ ಯೋಧರು ಭಾರತ - ಬಾಂಗ್ಲಾ ಗಡಿಯ ಬಳಿ ರಾತ್ರಿ ವೇಳೆ ಸುಮಾರು 10 ರಿಂದ 12 ಜನ ಕಳ್ಳಸಾಗಾಣಿಕೆದಾರರು ಗಡಿ ಬೇಲಿಯ ಕಡೆಗೆ ಬರುತ್ತಿದ್ದರು. ಭಾರತೀಯ ಸೈನಿಕರನ್ನು ಕಾಣುತ್ತಿದ್ದಂತೆ ಕಾಡಿನಲ್ಲಿ ಓಡಲು ಆರಂಭಿಸಿದ್ದಾರೆ.
ಗುಪ್ತಚರ ಮೂಲಗಳಿಂದ ಬಂದ ಮಾಹಿತಿಯ ಮೇರೆಗೆ ವಿಶೇಷ ಪಡೆಯನ್ನು ರಚಿಸಿ ಗಡಿಯ ಬಳಿ ಶೋಧಕಾರ್ಯ ನಡೆಸಲಾಗಿದೆ. ಈ ವೇಳೆ ಮಣ್ಣಿನಡಿಯಲ್ಲಿ ರಂಧ್ರಗಳನ್ನು ಕೊರೆದು ಹುದುಗಿಸಿಟ್ಟಿದ್ದ 8 ಚೀಲಗಳು ಪತ್ತೆಯಾಗಿವೆ. ಚೀಲಗಳನ್ನು ತೆರೆದು ನೋಡಿದಾಗ ವಿವಿಧ ಕಂಪೆನಿಯ ಮೊಬೈಲ್ ಫೋನ್ಗಳಿದ್ದವು. ಎಲ್ಲವನ್ನೂ ವಶಕ್ಕೆ ಪಡೆಯಲಾಗಿದ್ದು, ಇದರ ಭಾರತೀಯ ಮೊತ್ತ 39,29,000 ರೂ. ಎಂದು ಅಂದಾಜಿಸಲಾಗಿದೆ. ಮೊಬೈಲ್ ಫೋನ್ ಕಳ್ಳಸಾಗಣಿಕೆಯಲ್ಲಿ ತೊಡಗಿರುವ ಭಾರತೀಯ ಮೂಲದ ಕಳ್ಳಸಾಗಣೆದಾರರ ಪತ್ತೆ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಬೈಷ್ನಬ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬಿಎಸ್ಎಫ್ ತಿಳಿಸಿದೆ.
ಭಾರತ - ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆ ತಡೆಯಲು ಈಗಾಗಲೇ ಕಟ್ಟುನಿಟ್ಟಿನ ಕ್ರಮ ಬಿಎಸ್ಎಫ್ ತೆಗೆದುಕೊಂಡಿದೆ ಎಂದು 70ನೇ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ತಿಳಿಸಿದ್ದಾರೆ.