ಕಾಸರಗೋಡು: ಮಕ್ಕಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಪರಿಹರಿಸಲು ಕಾಸರಗೋಡಿನಲ್ಲಿ ಆರಂಭಿಸಿರುವ ಮಕ್ಕಳ ಸ್ನೇಹಿ ಪೆÇಲೀಸ್ ಠಾಣೆಗಳು ಜಿಲ್ಲೆಗೆ ಮಾದರಿಯಾಗುತ್ತಿದೆ. ಮಕ್ಕಳ ಸ್ನೇಹಿ ಪೆÇಲೀಸ್ ಠಾಣೆಗಳು ಮಕ್ಕಳ ಸುರಕ್ಷತೆ ಮತ್ತು ಕಲ್ಯಾಣವನ್ನು ಮುಂದಿಟ್ಟುಕೊಂಡು ಕೇರಳ ಪೆÇಲೀಸರು ಪ್ರಾರಂಭಿಸಿರುವ ಯೋಜನೆಯಾಗಿದೆ.
ಜಿಲ್ಲೆಯಲ್ಲಿ ಮಕ್ಕಳ ಸ್ನೇಹಿ ಪೆÇಲೀಸ್ ಠಾಣೆಗಳೆಂದರೆ ಬೇÀುಂಜೇಶ್ವರಂ, ಕುಂಬಳೆ, ಕಾಸರಗೋಡು, ವಿದ್ಯಾನಗರ, ಕಾಸರಗೋಡು ಮಹಿಳಾ ಪೆÇಲೀಸ್ ಠಾಣೆ, ಬದಿಯಡ್ಕ, ಆದೂರು, ಬೇಡಡ್ಕ, ಬೇಕಲ, ಅಂಬಲತ್ತರ, ರಾಜಪುರಂ, ನೀಲೇಶ್ವರಂ ಮತ್ತು ವೆಳ್ಳರಿಕುಂಡ್ ಠಾಣೆಗಳು ಮಕ್ಕಳ ಸ್ನೇಹಿ ಪೊಲೀಸ್ ಠಾಣೆಗಳಾಗಿ ಗುರುತಿಸಲಸ್ಪಟ್ಟಿದೆ.
ಈ ವ್ಯವಸ್ಥೆ ಹೊಂದಿರುವ ಠಾಣೆಗಳಿಗೆ ದೂರುದಾರರೊಂದಿಗೆ ಬರುವ ಮಕ್ಕಳು ನಿರ್ಭಯವಾಗಿ ಸಮಯ ಕಳೆಯಲು ಸಹಾಯ ಮಾಡುತ್ತದೆ. ಇಲ್ಲಿ ಮಕ್ಕಳನ್ನು ಸಂತೋಷಪಡಿಸುವ ಅನೇಕ ವಿಷಯಗಳಿವೆ. ಯಾವುದೇ ಆತಂಕವಿಲ್ಲದೆ, ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಹಕಾರಿಯಾಗಲಿದೆ. ಈ ಠಾಣೆಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಸ್ಥಳ ಇರಲಿದ್ದು, ಟಿವಿ,ಮಕ್ಕಳಿಗಾಗಿ ಪುಸ್ತಕಗಳು, ಡ್ರಾಯಿಂಗ್ ಸೌಲಭ್ಯಗಳು ಮತ್ತು ಆಟಿಕೆಗಳನ್ನು ಸಹ ಒದಗಿಸಲಾಗಿದೆ.
ಮಕ್ಕಳ ಸ್ನೇಹಿ ಪೆÇಲೀಸ್ ಠಾಣೆಗಳಲ್ಲಿ ಇತರ ಪೆÇಲೀಸ್ ಠಾಣೆಗಳಿಗಿಂತ ಪೆÇಲೀಸರ ವರ್ತನೆಯೂ ಭೀನ್ನವಾಗಿರಲಿದೆ. ಹೆಚ್ಚುವರಿ ಎಸ್ಪಿ ಪಿ.ಕೆ. ರಾಜು ಅವರು ಮಕ್ಕಳಸ್ನೇಹಿ ಪೊಲೀಸ್ ಠಾಣೆಗಳ ಜಿಲ್ಲಾ ನೋಡಲ್ ಅಧಿಕಾರಿಯಾಗಿದ್ದಾರೆ.
ಒಂದು ಜಿಲ್ಲೆಜಿಲ್ಲೆಯಲ್ಲಿ ವರ್ಷದಲ್ಲಿ 1500ಕ್ಕೂ ಹೆಚ್ಚು ದೂರುಗಳು ಬಂದಿವೆ. ಎಸ್.ಪಿ.ಸಿ, ಸ್ಕೌಟ್ ಮತ್ತು ಗೈಡ್ಸ್, ಎನ್‍ಸಿಸಿ ವಿದ್ಯಾರ್ಥಿಗಳಿಗೆ ವಿವಿಧ ಬ್ಯಾಚುಗಳಲ್ಲಾಗಿ ವಿವಿಧ ವಿಷಯಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಸಮಾಜದಲ್ಲಿ ಹಾದಿ ತಪ್ಪುವ ಮೂಲಕ ಸಂಕಷ್ಟ ಅನುಭವಿಸುವ ಹಲವು ವಿದ್ಯಾರ್ಥಿಗಳನ್ನು ಮಕ್ಕಳಸ್ನೇಹಿ ಪೊಲೀಸ್ ಠಾಣೆ ಹಾಗೂ 'ನಗು'ಯೋಜನೆ ಮೂಲಕ ಸರಿದಾರಿಗೆ ತರಬಹುದು ಎಂದು ನೋಡೆಲ್ ಅಧಿಕಾರಿ ಪಿ.ಕೆ ರಾಜು ತಿಳಿಸಿದ್ದಾರೆ.
ಸಮಾಜಕ್ಕೆ ಮಾದರಿಯಾಗುತ್ತಿರುವ ಜಿಲ್ಲೆಯ ಮಕ್ಕಳ ಸ್ನೇಹಿ ಪೆÇಲೀಸ್ ಠಾಣೆಗಳು
0
ಸೆಪ್ಟೆಂಬರ್ 06, 2022
Tags