ಮಂಜೇಶ್ವರ: ವಿವಾನ್ ಪೆÇ್ರಡಕ್ಷನ್‍ನ ವತಿಯಿಂದ ತಯಾರಾಗುತ್ತಿರುವ "ಐಸಬಾಸ್" ಎಂಬ ತುಳು ವಿಭಿನ್ನ ಅಲ್ಬಂನ ಪೋಸ್ಟರನ್ನು ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಚಾವಡಿಯಲ್ಲಿ ಬಿಡುಗಡೆಗೊಳಿಸಲಾಯಿತು. ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ನಿರ್ಮಾಪಕಿ ವಿದ್ಯಾ ವೇಣುಗೋಪಾಲ ಆಚಾರ್ಯ, ನಿರ್ದೇಶಕ ಚೇತನ್ ಕೆ. ವಿಟ್ಲ,ಸಂಜು ಮೈಸೂರ್ ಮೊದಲಾದವರು ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ಮಟ್ಟದ ಖ್ಯಾತ ಚಿತ್ರ ಕಲಾವಿದ ದಿ.ಎಂಜಿಕೆ ಆಚಾರ್ಯ ಅವರ ಕನಸಿನ ಕೂಸಾದ ಟೀಮ್ ಎಂಜಿಕೆ ಶಿಲ್ಪಕಲಾ ಕುಂಬಳೆ ಇವರ ಕಲಾತ್ಮಕ ನಿದೇಶನದಲ್ಲಿ ಐಸಬಾಸ್ ಮೂಡಿ ಬರಲಿದೆ. ಭವಾನಿ ಶಂಕರ್ ಗಾಯನ,ಬಾತು ಕುಲಾಲ್ ಡಿಒಪಿ ಹಾಗೂ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಆಶ್ವಿನ್ ಬಾಬಣ್ಣ ಪುತ್ತೂರು ಮಾಸ್ಟರಿಂಗ್ ನಡೆಸಿದ ಐಸಬಾತ್ ನಲ್ಲಿ ವೇಣುಗೋಪಾಲ ಆಚಾರ್ಯ, ಸುನಿಲ್ ಕುಮಾರ್, ಲಿಂಗಪ್ಪ ಕುಬಣೂರು, ಚರಣ್ ಮುಳ್ಳೇರಿಯ,ಸಂಜು ಮೈಸೂರು,ಅಚಲ್ ವಿಟ್ಲ,ಬಾಭು ಬದಿಯಡ್ಕ,ಚೇತನ್ ಕೆ. ವಿಟ್ಲ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಜ್ಜೆ ಡಿಸೈನ್ಸ್ ನ ಶಶಿ ಆಚಾರ್ ಕನ್ಯಾನ ಪ್ರಚಾರ ವಿನ್ಯಾಸ ನಿರ್ವಹಿಸಿದ್ದಾರೆ. ಇದರ ಶೀರ್ಷೀಕೆಯನ್ನು ಖ್ಯಾತ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಬಿಡುಗಡೆ ಮಾಡಿದ್ದರು.
ತುಳು ಅಕಾಡೆಮಿ ಚಾವಡಿಯಲ್ಲಿ "ಐಸಬಾಸ್" ತುಳು ಅಲ್ಬಂ ಪೆÇೀಸ್ಟರ್ ಬಿಡುಗಡೆ
0
ಸೆಪ್ಟೆಂಬರ್ 19, 2022