ಕಾಸರಗೋಡು: ಕುಟುಂಬಶ್ರೀ ಕಾರ್ಯಕರ್ತರು ಮಾತ್ರ ಷೇರುದಾರರಾಗಿ ಆರಂಭಿಸಿದ ಬೇಡಡ್ಕ ಕುಟುಂಬಶ್ರೀ ಆಗ್ರೋ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂಪನಿ ಅಧೀನದಲ್ಲಿರುವ ಆನಂದಮಠದ 28 ಎಕರೆ ಜಾಗದಲ್ಲಿ ಕೈಗೊಂಡ ಕುರುಚಲುಕಾಡು ಶುಚೀಕರಣ ಕಾರ್ಯ ಪ್ರಶಂಸನೀಯವಾಯಿತು.
ಬೇಡಡ್ಕ ಪಂಚಾಯಿತಿ ವ್ಯಾಪ್ತಿಯ 350 ಕುಟುಂಬಶ್ರೀಗಳ ಮಹಿಳೆಯರು ಸೇರಿದಂತೆ 2ಸಾವಿರಕ್ಕೂ ಹೆಚ್ಚುಮಂದಿ ಶುಚೀಕರಣ ಕಾರ್ಯದಲ್ಲಿ ಕೈಜೋಡಿಸಿದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಸಮಾರಂಭ ಉದ್ಘಾಟಿಸಿದರು. ಬೇಡಡ್ಕ ಪಂಚಾಯಿತಿ ಉಪಾಧ್ಯಕ್ಷ ಎ.ಮಾಧವನ್ ಅಧ್ಯಕ್ಷತೆ ವಹಿಸಿದ್ದರು. ಬೇಡಡ್ಕ ಗ್ರಾಮ ಪಂಚಾಯಿತಿ ಹಾಗೂ ಕುಟುಂಬಶ್ರೀ ಜಿಲ್ಲಾ ಮಿಷನ್ ಕಾಸರಗೋಡು ಇವರ ಸಹಯೋಗದಲ್ಲಿ ಬೇಡಡ್ಕ ಸಿಡಿಎಸ್ ನೇತೃತ್ವದಲ್ಲಿ ಟೀಮ್ ಬೇಡಡ್ಕ ಕುಟುಂಬಶ್ರೀ ಆಗ್ರೋ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂಪನಿಯನ್ನು ಪ್ರಾರಂಭಿಸಲಾಗಿದೆ.
ಕುಟುಂಬಶ್ರೀ ಸದಸ್ಯರಿಂದ ಕೇವಲ 1000 ರೂ.ಗಳ ಷೇರನ್ನು ಸ್ವೀಕರಿಸುವ ಮೂಲಕ ಕಂಪನಿಯು ಪ್ರಾರಂಭಗೊಂಡಿದ್ದು, 6 ತಿಂಗಳೊಳಗೆ 28 ಎಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಜತೆಗೆ ಜಿಲ್ಲೆಯ ರೈತರಿಂದ ನೇರವಾಗಿ ಹಣ್ಣು, ತರಕಾರಿ ಸಂಗ್ರಹಿಸಿ ಮುಂದಿನ ಮೂರು ತಿಂಗಳೊಳಗೆ ಶೀತಲೀಕರಣ ವ್ಯವಸ್ಥೆ ಕಲ್ಪಿಸಿ ಮಾರುಕಟ್ಟೆಗೆ ತರಲು ಕಂಪನಿ ಪ್ರಯತ್ನಿಸುತ್ತಿದೆ. ಜಿಲ್ಲಾ ಪಂಚಾಯಿತಿ ನೆರವಿನೊಂದಿಗೆ ಯೋಜನೆ ಅನುಷ್ಠಾನಗೊಳ್ಳಲಿದೆ.
ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಬ್ಲಾಕ್ ಪಂಚಾಯಿತಿ ಸದಸ್ಯೆ ಸಾವಿತ್ರಿ ಬಾಲನ್, ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವರದರಾಜ್, ಲತಾ ಗೋಪಿ, ವಸಂತಕುಮಾರಿ, ಕುಟುಂಬಶ್ರೀ ಜಿಲ್ಲಾ ಮಿಷನ್ ಎಡಿಎಂಸಿ ಸಿ.ಎಚ್.ಇಕ್ಬಾಲ್, ಯೋಜನಾ ಸಮಿತಿ ಸರಕಾರದ ನಾಮನಿರ್ದೇಶಿತ ಅ.ರಾಮಚಂದ್ರನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಇ.ಪದ್ಮಾವತಿ, ಎಂ.ಅನಂತನ್, ಇ.ಕುಂಜಿರಾಮನ್, ಕೆ. ಮಣಿಕಂಠನ್ ಮುಂತಾದವರು ಉಪಸ್ಥೀತರಿದ್ದರು. ಸಿಡಿಎಸ್ ಅಧ್ಯಕ್ಷೆ ಎಂ.ಗುಲಾಬಿ ಸ್ವಾಗತಿಸಿದರು. ಶಿವಣ್ಣ ಚೂರಿ ವಂದಿಸಿದರು.
ಬೇಡಡ್ಕ ಕುಟುಂಬಶ್ರೀ ಆಗ್ರೋ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂಪನಿಯಿಂದ ಶುಚೀಕರಣ ಕಾರ್ಯ
0
ಸೆಪ್ಟೆಂಬರ್ 22, 2022