ತಿರುವನಂತಪುರ: ಪಿ.ಎಫ್.ಐ. ನಿಷೇಧದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅತ್ಯಂತ ಜಾಗರೂಕರಾಗಿರಲು ಡಿಜಿಪಿ ಸೂಚನೆ ಈಡಿದ್ದಾರೆ. ಜಿಲ್ಲಾ ಪೋಲೀಸ್ ವರಿμÁ್ಠಧಿಕಾರಿಗಳಿಗೆ ಡಿಜಿಪಿ ಸೂಚನೆ ನೀಡಿರುವರು.
ಕೇಂದ್ರ ಗೃಹ ಸಚಿವಾಲಯವು ಪಾಪ್ಯುಲರ್ ಫ್ರಂಟ್ ಮೇಲೆ ನಿμÉೀಧ ಹೇರಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂಸಾಚಾರದ ಸಾಧ್ಯತೆಯನ್ನು ಪರಿಗಣಿಸಿ ಎಚ್ಚರಿಕೆ ನೀಡಲಾಗಿದೆ.
ಪಾಪ್ಯುಲರ್ ಫ್ರಂಟ್ ನಿμÉೀಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿ ರಾಜ್ಯದಲ್ಲಿ ಅನೇಕರು ರ್ಯಾಲಿಗೂ ಮುಂದಾಗಿರುವ ಸೂಚನೆಗಳಿವೆ. ಆದರೆ ಈ ಕ್ರಮದ ವಿರುದ್ಧ ವಿವಿಧೆಡೆ ಪ್ರತಿಭಟನೆಗಳು ವ್ಯಕ್ತವಾಗುವ ಪರಿಸ್ಥಿತಿ ಇದೆ. ರಾಷ್ಟ್ರವ್ಯಾಪಿ ತನಿಖಾ ಸಂಸ್ಥೆಗಳು ಕೈಗೊಂಡ ಕ್ರಮವನ್ನು ವಿರೋಧಿಸಿ ಮೊನ್ನೆ ರಾಜ್ಯದಲ್ಲಿ ನಡೆದ ಹರತಾಳದಲ್ಲಿ ಪಿ.ಎಫ್.ಐ ವ್ಯಾಪಕ ಹಿಂಸಾಚಾರವನ್ನು ನಡೆಸಿತ್ತು. ಘಟನೆಯಲ್ಲಿ ಪೋಲೀಸರ ವಿರುದ್ಧವೂ ಆರೋಪ ಕೇಳಿಬಂದಿತ್ತು. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ.
ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ಕೇಂದ್ರವು ಪಾಪ್ಯುಲರ್ ಫ್ರಂಟ್ ಮತ್ತು ಅದರ ಎಂಟು ಅಂಗಸಂಸ್ಥೆಗಳನ್ನು ನಿμÉೀಧಿಸಿತು. ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಂಸ್ಥೆಗಳೊಂದಿಗೆ ಕೆಲಸ ಮಾಡುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಐದು ವರ್ಷಗಳ ಅವಧಿಗೆ ನಿμÉೀಧವಿದೆ.ಭಯೋತ್ಪಾದಕರ ನಂಟು ಪತ್ತೆಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಪಾಪ್ಯುಲರ್ ಫ್ರಂಟ್ ನ ಪ್ರಮುಖ ನಾಯಕರನ್ನು ಎನ್ ಐಎ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.
ಮೂರು ಪ್ರಮುಖ ಕಾರಣಗಳಿಗಾಗಿ ಪಾಪ್ಯುಲರ್ ಫ್ರಂಟ್ ಅನ್ನು ನಿμÉೀಧಿಸಲಾಯಿತು. ಮೊದಲನೆಯದು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದು. ಎರಡನೆಯದು ಭಯೋತ್ಪಾದಕ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸುವುದು. ಇಡಿ ಸೇರಿದಂತೆ ತನಿಖಾ ಸಂಸ್ಥೆಗಳು ಇದಕ್ಕೆ ಸಾಕ್ಷಿಯನ್ನು ಕಂಡುಕೊಂಡಿದ್ದವು. ಮೂರನೆಯದು ಜನರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಸೇರಿಸಿಕೊಳ್ಳುವುದು ಮತ್ತು ತರಬೇತಿ ಶಿಬಿರಗಳನ್ನು ಆಯೋಜನೆ. ಈ ಮೂರು ಗಂಭೀರ ಅಪರಾಧಗಳ ಆರೋಪದ ಮೇಲೆ ಸಂಘಟನೆಯ ರಾಷ್ಟ್ರೀಯ ನಾಯಕರನ್ನು ರಾಷ್ಟ್ರವ್ಯಾಪಿ ಬಂಧಿಸಲಾಗಿತ್ತು.
ಪಾಪ್ಯುಲರ್ ಫ್ರಂಟ್ ನಿಷೇಧ; ರಾಜ್ಯದಲ್ಲಿ ಅಲರ್ಟ್ ಘೋಷಣೆ
0
ಸೆಪ್ಟೆಂಬರ್ 28, 2022
Tags