ಕಣ್ಣೂರು: ರಾಜ್ಯಾದ್ಯಂತ ಪಿ.ಎಫ್.ಐ ಕಚೇರಿಗಳ ಮೇಲೆ ಎನ್‍ಐಎ ದಾಳಿ ನಡೆಸಿದ ನಂತರ ಪಿಎಫ್‍ಐ ಮುಖಂಡರು ವ್ಯಾಪಕ ಹಿಂಸಾಚಾರಕ್ಕಿಳಿದಿದ್ದಾರೆÉ.
ರಾಜ್ಯಾದ್ಯಂತ ವ್ಯಾಪಕ ದಾಳಿ ನಡೆಸಲಾಗುತ್ತಿದೆ. ದಾಳಿಯಲ್ಲಿ ರಸ್ತೆ ತಡೆ, ಅಂಗಡಿಗಳನ್ನು ಧ್ವಂಸ ಮಾಡುವುದು ಮತ್ತು ವಾಹನಗಳ ಗಾಜುಗಳನ್ನು ಒಡೆಯುವುದು ಕಂಡುಬಂದಿದೆ. ಕಣ್ಣೂರಿನಲ್ಲಿ ಪ್ರೆಸ್ ವ್ಯಾನ್ ಮೇಲೂ ಬಾಂಬ್ ದಾಳಿ ನಡೆದಿದೆ. ಉಲಿಯಲ್ಲಿ ಘಟನೆ ನಡೆದಿದೆ.
ಕಣ್ಣೂರು ನಗರದಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ. ಕೆಎಸ್‍ಆರ್‍ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಕಣ್ಣೂರಿನಿಂದ ಇರಿಟ್ಟಿಗೆ ತೆರಳುವ ಮಾರ್ಗದಲ್ಲಿ ಮೂರು ಕಡೆಯಿಂದ ದಾಳಿಕೋರರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ.
ಪತ್ರಿಕಾ ವ್ಯಾನ್ ಮೇಲೂ ಬಾಂಬ್ ದಾಳಿ ನಡೆದಿದೆ. ಸ್ಥಳೀಯರ ಕಾರಿನ ಗಾಜುಗಳನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳಿದ್ದ ಪ್ರಯಾಣಿಕರ ವಾಹನದ ಕಿಟಕಿ ಕಲ್ಲುತೂರಾಟದಲ್ಲಿ ಒಡೆದಿದೆ. ವಳಪಟ್ಟಣಂ ಪ್ರದೇಶದಲ್ಲಿ ಕೆಎಸ್‍ಆರ್‍ಟಿಸಿ ಸ್ವಿಫ್ಟ್ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. 15 ವರ್ಷದ ಬಾಲಕಿ ಗಾಯಗೊಂಡಿದ್ದಾಳೆ.
ದಾಳಿಯ ನಂತರ ಕಣ್ಣೂರಿನಲ್ಲಿ 25 ಮಂದಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಕಣ್ಣೂರಿನಲ್ಲಿ ವ್ಯಾಪಕ ಹಿಂಸಾಚಾರ: ಪತ್ರಿಕೆ ವಿತರಣೆ ವಾಹನದ ಮೇಲೆ ಬಾಂಬ್ ದಾಳಿ: ಪ್ರಯಾಣಿPರಿಗೆ ಹಲ್ಲೆ: 24 ಮಂದಿ ಪಿ.ಎಫ್.ಐ ಕಾರ್ಯಕರ್ತರ ಬಂಧನ
0
ಸೆಪ್ಟೆಂಬರ್ 23, 2022
Tags