ಬೆಂಗಳೂರು : ಪಿಎಫ್‌ಐ ಶಂಕಿತ ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ಹಲವು ಸ್ಪೋಟಕ ಮಾಹಿತಿಯನ್ನು ಕಲೆಹಾಕಿದ್ದಾರೆ.
ಪಿಎಫ್‌ಐ 'PFI' ಶಂಕಿತರ ಮೊಬೈ'ಲ್ ನಲ್ಲಿ ಸಾಕ್ಷಿಗಳನ್ನೇ ನಾಶ ಮಾಡುವ ಆಯಪ್ ಇರುವುದು ಕಂಡು ಬಂದಿದೆ.ಬಂಧಿತ ಎಲ್ಲರ ಮೊಬೈಲ್ ನಲ್ಲಿ ತಾವೇ ಸಿದ್ದಪಡಿಸಿದ ಐ ರೀಡರ್ ಆಯಪ್ ಪತ್ತೆಯಾಗಿದೆ.
ಎನ್ ಐ ಎ ಹಾಗೂ ಬೆಂಗಳೂರು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಹಲವು ಸ್ಪೋಟಕ ಮಾಹಿತಿ ಕಲೆಹಾಕಿದ್ದಾರೆ.
ಐ-ರೀಡರ್ಆಪ್
ಪಿಎಫ್‌ಐ ದಾಳಿ ವೇಳೆ ಬಂಧಿತ ಹದಿನೈದು ಜನರ ಮೊಬೈಲ್ ನಲ್ಲಿ ಐ-ರೀಡರ್ ಆಪ್ ಇರುವುದು ಪತ್ತೆಯಾಗಿದೆ. ವಿದ್ವಂಸಕ ಕೃತ್ಯವೆಸಗಲು ಶಂಕಿತ ವ್ಯಕ್ತಿಗಳೇ ಇಂಥದ್ದೊಂದು ಹೊಸ ಆಪ್ ಸೃಷ್ಟಿ ಮಾಡಿಕೊಂಡಿದ್ದಾರೆ. ಅದನ್ನು ಎಲ್ಲರೂ ತಮ್ಮ ತಮ್ಮ ಮೊಬೈಲ್ ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಆ ಮೂಲಕ ಪೊಲೀಸರಿಗೆ ಸಿಕ್ಕಿಬೀಳದಂತೆ , ಪೊಲೀಸರಿಗೆ ತಮ್ಮ ಗುರುತು ಸಿಗದಂತೆ ಸಹಾಯ ಮಾಡುವಲ್ಲಿ ಈ ಆಯಪ್ ಬಳಕೆಯಾಗುತ್ತಿತ್ತಂತೆ.