HEALTH TIPS

ಮಹಿಳೆಯನ್ನು ಡ್ರೈವಿಂಗ್ ಟೆಸ್ಟ್​ಗೆ ಕರೆದೊಯ್ದ RTO ಅಧಿಕಾರಿಯಿಂದ ಮಾರ್ಗ ಮಧ್ಯೆ ನಡೆಯಿತು ನೀಚ ಕೃತ್ಯ

 

          ಕೊಲ್ಲಂ: ಡ್ರೈವಿಂಗ್​ ಟೆಸ್ಟ್​ ವೇಳೆ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮೋಟಾರು ವೆಹಿಕಲ್​ ಇನ್ಸ್​ಪೆಕ್ಟರ್​ ಒಬ್ಬರನ್ನು ಕೇರಳ ಪೊಲೀಸರು ಬಂಧಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.

                 ಬಂಧಿತ ಅಧಿಕಾರಿಯನ್ನು ಎ.

ಎಸ್​. ವಿನೋದ್​ ಎಂದು ಗುರುತಿಸಲಾಗಿದೆ. ಕುಂದಾರಾ ಮೂಲದ ವಿನೋದ್​, ಪಠಾಣಪುರಂನ ಆರ್​ಟಿಒ ಕಚೇರಿಯ ಕೆಲಸ ನಿರ್ವಹಿಸುತ್ತಿದ್ದರು. ಕೇರಳ ಹೈಕೋರ್ಟ್​ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬಳಿಕ ಒಂದು ವಾರಗಳ ಕಾಲ ತಲೆಮರೆಸಿಕೊಂಡಿದ್ದ ವಿನೋದ್​, ಇದೀಗ ಪುನಲೂರ್​ ಡಿವೈಎಸ್​ಪಿ ಮುಂದೆ ಶರಣಾಗಿದ್ದಾರೆ.

                ಈ ಘಟನೆ ಜುಲೈ 19ರಂದು ನಡೆಯಿತು. ಡ್ರೈವಿಂಗ್​​ ಟೆಸ್ಟ್​ ಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ಕಾರಿನ ಒಳಗಡೆಯೇ ಮಹಿಳೆಯ ಮೇಲೆ ವಿನೋದ್​ ಅನುಚಿತವಾಗಿ ವರ್ತಿಸಿದ್ದರು. ಘಟನೆ ಸಂಬಂಧ ಪಠಾಣಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಬೆನ್ನಲ್ಲೇ ವಿನೋದ್​ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries