ಬ್ಲೆಂಡ್ ಮಾಡದ ಇಂಧನದ ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವ ನಿಯಮ ಅ.1 ರಿಂದ ಜಾರಿಯಾಗಬೇಕಿತ್ತು. ಆದರೆ ಇಂಧನ ಉದ್ದಿಮೆಗೆ ಈ ಕ್ರಮವನ್ನು ಜಾರಿಗೊಳಿಸುವುದಕ್ಕೆ ಸಮಯಾವಕಾಶ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒಂದು ತಿಂಗಳ ವಿನಾಯಿತಿಯನ್ನು ಘೋಷಿಸಿದೆ.
ನ. 1ರಿಂದ ಬ್ಲೆಂಡ್ ಮಾಡದ ಇಂಧನದ ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ಜಾರಿಯಾಗಲಿದೆ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಗೆಜೆಟ್ ನೋಟಿಫಿಕೇಷನ್ ನಲ್ಲಿ ತಿಳಿಸಿದೆ.
ಬಜೆಟ್ ನಲ್ಲಿ 2 ಎಥೆನಾಲ್ ಹಾಗೂ ಬಯೋಡೀಸೆಲ್ ಜೊತೆಗೆ ಬ್ಲೆಂಡ್ ಮಾಡದ ಇಂಧನಕ್ಕೆ 2 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ಹಾಕುವುದನ್ನು ಘೋಷಿಸಿದ್ದರು.
ಪ್ರಸ್ತುತ ಕಬ್ಬು ಅಥವಾ ಹೆಚ್ಚುವರು ಧಾನ್ಯಗಳಿಂದ ತೆಗೆಯಲಾಗುವ ಎಥೆನಾಲ್ ನ್ನು ಶೇ.90 ರಷ್ಟು ಇಂಧನದೊಂದಿಗೆ ಮಿಶ್ರಣ ಮಾಡಲಾಗುತ್ತದೆ, ಇದರಿಂದಾಗಿ ಇಂಧನ ಆಮದು ಪ್ರಮಾಣದಲ್ಲಿ ಸಾಕಷ್ಟು ಕಡಿತಗೊಳಿಸಬಹುದು ಹಾಗೂ ರೈತರಿಗೆ ಹೆಚ್ಚುವರಿ ಆದಾಯ ಮೂಲವನ್ನು ಸೃಷ್ಟಿಸಲಾಗುತ್ತಿದೆ.