ನವದೆಹಲಿ: ಭಾರತದಲ್ಲಿ 10,000 ರೂ.ಗಿಂತ ಹೆಚ್ಚು ಬೆಲೆಯ 4ಜಿ ಫೆÇೀನ್‍ಗಳ ಉತ್ಪಾದನೆಯನ್ನು ಶೀಘ್ರದಲ್ಲೇ ನಿಲ್ಲಿಸಲಾಗುವುದು ಎಂದು ಮೊಬೈಲ್ ಫೆÇೀನ್ ಕಂಪನಿಗಳ ಪ್ರತಿನಿಧಿಗಳು ಸರ್ಕಾರಕ್ಕೆ ಮಾಹಿತಿ ನೀಡಿವೆ.
ಆದಷ್ಟು ಬೇಗ 5 ಜಿ. ಫೆÇೀನ್‍ಗಳ ಉತ್ಪಾದನೆಯನ್ನು ವೇಗಗೊಳಿಸುವುದಾಗಿ ಕಂಪನಿಗಳು ಸರ್ಕಾರಕ್ಕೆ ಭರವಸೆ ನೀಡಿವೆ. ದೇಶದಲ್ಲಿ ಮಾರಾಟವಾಗುವ 10,000 ರೂಪಾಯಿಗಿಂತ ಹೆಚ್ಚಿನ ಸ್ಮಾರ್ಟ್ ಫೆÇೀನ್‍ಗಳಲ್ಲಿ 5 ಜಿ ಲಭ್ಯವಾಗುವಂತೆ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಮೊಬೈಲ್ ಫೆÇೀನ್ ಕಂಪನಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಂದಿನ ಮೂರು ತಿಂಗಳೊಳಗೆ ಗ್ರಾಹಕರಿಗೆ 5 ಜಿ. ಸೇವೆಗಳನ್ನು ಒದಗಿಸಲು ತ್ವರಿತ ಪರಿವರ್ತನೆಗೆ ತಯಾರಿ ನಡೆಸುವಂತೆ ಕೇಂದ್ರ ಸರ್ಕಾರವು ಮೊಬೈಲ್ ಸೇವಾ ಪೂರೈಕೆದಾರರು ಮತ್ತು ಸ್ಮಾರ್ಟ್‍ಫೆÇೀನ್ ಕಂಪನಿಗಳಿಗೆ ಸೂಚಿಸಿದೆ.
ದೇಶದಲ್ಲಿ ಒಟ್ಟು 750 ಮಿಲಿಯನ್ ಮೊಬೈಲ್ ಪೋನ್ ಬಳಕೆದಾರರಿದ್ದಾರೆ. ಇದರಲ್ಲಿ 100 ಮಿಲಿಯನ್ ಗ್ರಾಹಕರು 5 ಜಿ. ಸೇವೆಗಳ ಸಾಮಥ್ರ್ಯವಿರುವ ಪೋನ್‍ಗಳನ್ನು ಈಗಾಗಲೇ ಬಳಸುತ್ತಿದ್ದಾರೆ. ಆದರೆ ಪ್ರಸ್ತುತ 350 ಮಿಲಿಯನ್ ಗೂ ಹೆಚ್ಚು ಗ್ರಾಹಕರು 3ಜಿ/4ಜಿ ಸ್ಮಾರ್ಟ್ ಫೆÇೀನ್ ಬಳಸುತ್ತಿದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ 5ಜಿಗೆ ತರಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.
10000 ರೂ.ಗಂತ ಹೆಚ್ಚಿನ ಬೆಲೆಯ ಸ್ಮಾರ್ಟ್‍ಪೋನ್‍ಗಳು 5ಜಿಯಾಗಿ ಉನ್ನತೀಕರಣ: ಪ್ರಸ್ತಾವನೆಗೆ ಅಸ್ತು
0
ಅಕ್ಟೋಬರ್ 12, 2022
Tags