HEALTH TIPS

'ಪ್ರತಿ ಮಾರ್ಪಾಡಿಗೂ 10,000 ರೂ.ದಂಡ: ಕುಡಿದು ಚಲಾಯಿಸಿದರೆ ಲೈಸೆನ್ಸ್ ರದ್ದು’: ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ ಸಚಿವ ಆಂಟನಿ ರಾಜು


       ತಿರುವನಂತಪುರಂ: ಅಕ್ರಮವಾಗಿ ಬಸ್ ಗಳನ್ನು ಮಾರ್ಪಾಡು ಮಾಡಿದರೆ ಪ್ರತಿ bದಲಾವಣೆಗೆ 10,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ. ಅಕ್ರಮ ವ್ಯವಸ್ಥೆ ಹೊಂದಿರುವ ವಾಹನಗಳು ರಸ್ತೆಗಿಳಿಯುವಂತಿಲ್ಲ. ವೇಗ ನಿಯಂತ್ರಣ ವ್ಯವಸ್ಥೆಗಳು, ಹೆಚ್ಚುವರಿ ಫಿಟ್ಟಿಂಗ್‍ಗಳು, ಅನಧಿಕೃತ ಮಾರ್ಪಾಡುಗಳು, ಬ್ರೇಕ್ ಲೈಟ್, ಪಾಕಿರ್ಂಗ್ ಲೈಟ್, ಸಿಗ್ನಲ್ ಲೈಟ್ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಸಚಿವರು ಹೇಳಿದರು.
        ಕೇರಳದಲ್ಲಿ 86 ಆರ್‍ಟಿ ಕಚೇರಿಯಲ್ಲಿರುವ ಪ್ರತಿಯೊಬ್ಬ ಅಧಿಕಾರಿಗೆ ಸದರಿ ಕಛೇರಿಯ ಅಡಿಯಲ್ಲಿ ನಿಗದಿತ ಸಂಖ್ಯೆಯ ವಾಹನಗಳನ್ನು ತಪಾಸಣೆ ಮಾಡುವ ಜವಾಬ್ದಾರಿಯನ್ನು ನಿಯೋಜಿಸಲಾಗುವುದು. ವಾಹನದಲ್ಲಿ ಅವ್ಯವಹಾರ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಯನ್ನೂ ಹೊಣೆ ಮಾಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಉಪ ಸಾರಿಗೆ ಆಯುಕ್ತರ ಮಟ್ಟದಲ್ಲಿ ಪ್ರತಿ ವಾರ ಕನಿಷ್ಠ 15 ವಾಹನ ತಪಾಸಣೆ ನಡೆಸಲಾಗುವುದು. ಅದರ ಮೇಲೆ ರಾಜ್ಯ ಮಟ್ಟದಲ್ಲಿ ಸೂಪರ್ ಚೆಕಿಂಗ್ ಇರುತ್ತದೆ. ಸಹಾಯಕ ಮೋಟಾರು ವಾಹನ ನಿರೀಕ್ಷಕರು, ಮೋಟಾರು ವಾಹನ ನಿರೀಕ್ಷಕರು, ಜಂಟಿ ಆರ್.ಟಿ.ಒ. ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
     ಅಮಲು ಪದಾರ್ಥಗಳನ್ನು ಸೇವಿಸಿ ವಾಹನ ಚಲಾಯಿಸುವವರ ಪತ್ತೆಗೆ ರಾಜ್ಯ ಅಬಕಾರಿ ಇಲಾಖೆಯೊಂದಿಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುವುದು. ಅಂತಹ ವ್ಯಕ್ತಿಗಳ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಇನ್‍ಸ್ಟಿಟ್ಯೂಟ್ ಆಫ್ ಡ್ರೈವರ್ ಟ್ರೈನಿಂಗ್ ಅಂಡ್ ರಿಸರ್ಚ್ (ಐ.ಡಿ.ಟಿ.ಆರ್.) ನಲ್ಲಿ ರಿಫ್ರೆಶ್ ತರಬೇತಿಯ ನಂತರವೇ ಪರವಾನಗಿಯನ್ನು ನವೀಕರಿಸಬೇಕು. ಏಕರೂಪದ ಬಣ್ಣ ಸಂಹಿತೆಗೆ ಸಂಬಂಧಿಸಿದಂತೆ ರಾಜ್ಯ ಸಾರಿಗೆ ಪ್ರಾಧಿಕಾರದ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಕಲರ್ ಕೋಡ್ ಉಲ್ಲಂಘಿಸುವ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ.
         ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲು ಮೊಬೈಲ್ ಆ್ಯಪ್ ವ್ಯವಸ್ಥೆ ಸಿದ್ಧಪಡಿಸಲಾಗುವುದು. ಸಾರ್ವಜನಿಕರು ಅಂತಹ ವಾಹನಗಳ ವೀಡಿಯೊಗಳನ್ನು ವಾಟ್ಸಾಪ್ ಮೂಲಕ ಕಳುಹಿಸಬಹುದು. ವಾಹನಗಳ ಅನಧಿಕೃತ ಮಾರ್ಪಾಡುಗಳ ದಂಡವನ್ನು ಕೇಂದ್ರ ಕಾಯ್ದೆಯ ನಿಬಂಧನೆಗಳ ಪ್ರಕಾರ ಪ್ರತಿ ಮಾರ್ಪಾಡಿಗೆ 5,000 ರೂ.ನಿಂದ 10,000 ರೂ.ಗೆ ಹೆಚ್ಚಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
           ಜಿಪಿಎಸ್ ಅನ್‍ಮೌಂಟ್ ಮಾಡದ ಸಾರ್ವಜನಿಕ ಕ್ಯಾರೇಜ್ ವಾಹನಗಳ ಸಿಎಫ್ ರದ್ದತಿ ಪ್ರಕ್ರಿಯೆಗೆ ಹೋಗುವುದು. ಎ.ಆರ್.ಐ ಅಧಿಕೃತ ತಯಾರಕರಿಂದ ಜಿ.ಪಿ.ಎಸ್. ರಾಜ್ಯದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಲಭ್ಯವಾಗುವಂತೆ ಕ್ರಮಕೈಗೊಳ್ಳಲು ಸಾರಿಗೆ ಆಯುಕ್ತರಿಗೆ ವಹಿಸಲಾಗಿದೆ.
          ಅಖಿಲ ಭಾರತ ಪರವಾನಗಿಯೊಂದಿಗೆ ಇತರೆ ರಾಜ್ಯಗಳಲ್ಲಿ ನೋಂದಣಿಯಾಗಿರುವ ಪ್ರವಾಸಿ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಸಾರಿಗೆ ಆಯುಕ್ತರ ಪ್ರಸ್ತಾವನೆ ರದ್ದುಪಡಿಸಲಾಗಿದ್ದು, ತಮಿಳುನಾಡು ಮಾದರಿಯಲ್ಲಿ ಕೇರಳದಲ್ಲೂ ವಾಹನ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಇಲ್ಲವಾದಲ್ಲಿ ನವೆಂಬರ್ 1ರಿಂದ ಅಂತಹ ವಾಹನಗಳ ನೋಂದಣಿಯನ್ನು ಕೇರಳಕ್ಕೆ ವರ್ಗಾಯಿಸಬೇಕು. ಚಾಲಕರ ಹಿರಿತನ ಮತ್ತು ಅಪಘಾತ-ಮುಕ್ತ ಚಾಲನಾ ಇತಿಹಾಸವನ್ನು ಪರಿಗಣಿಸಿ ವಾಹನ ಮಾಲೀಕರಿಗೆ ಲಾಭವನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

             ವಾಹನಗಳನ್ನು ಅನಧಿಕೃತವಾಗಿ ಮಾರ್ಪಡಿಸಲು ನೆರವಾಗುವ ಕಾರ್ಯಾಗಾರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದೇ 15ರೊಳಗೆ 4 ವಲಯಗಳಲ್ಲಿ ಸಾರಿಗೆ ಆಯುಕ್ತರು ಎಲ್ಲ ಮೋಟಾರು ವಾಹನ ಇಲಾಖೆ ಅಧಿಕಾರಿಗಳ ಸಭೆ ಕರೆದು ಈ ಪ್ರಕ್ರಿಯೆ ಚುರುಕುಗೊಳಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
                  ವಡಕಂಚೇರಿ ಬಸ್ ಅಪಘಾತದ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ 10.30ಕ್ಕೆ ಕೇರಳದಲ್ಲಿ ರಸ್ತೆ ಅಪಘಾತ ತಡೆ ಕುರಿತು ಉನ್ನತ ಮಟ್ಟದ ಸಭೆ ನಡೆಯಿತು. ಅಪಘಾತದ ಸಮಯದಲ್ಲಿ ವಾಹನದ ವೇಗವನ್ನು ನಿಯಂತ್ರಿಸುವ ಎಲೆಕ್ಟ್ರಾನಿಕ್ ನಿಯಂತ್ರಣ ಘಟಕವನ್ನು ಅಕ್ರಮವಾಗಿ ಬದಲಾಯಿಸಿರುವುದು ಕಂಡುಬಂದಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.
          ಇದಕ್ಕೆ ಕಾರಣರಾದ ವಾಹನ ಡೀಲರ್ ಮತ್ತು ವರ್ಕ್‍ಶಾಪ್ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲೀಸರಿಗೆ ದೂರು ನೀಡಲು ಪಾಲಕ್ಕಾಡ್ ಎನ್ ಪೋರ್ಸ್‍ಮೆಂಟ್ ಆರ್‍ಟಿಒಗೆ ವಹಿಸಲಾಗಿದೆ.
         ಕಾನೂನು ಉಲ್ಲಂಘಿಸುವ ವಾಹನಗಳನ್ನು ವಶಪಡಿಸಿಕೊಳ್ಳಲು ನಡೆಯುತ್ತಿರುವ ಕಾರ್ಯಾಚರಣೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries