ತಿರುವನಂತಪುರ: ವಿಶ್ವ ಆಘಾತ ದಿನದ ಅಂಗವಾಗಿ ಕಿಮ್ಸ್ ಹೆಲ್ತ್ ಆಂಬ್ಯುಲೆನ್ಸ್ ಚಾಲಕರನ್ನು ಗೌರವಿಸಿದೆ. ಚಾಲಕರನ್ನು ಸನ್ಮಾನಿಸಲು ಹೀರೋಸ್ ಆನ್ ವೀಲ್ಸ್ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ಮೊದಲು ಧಾವಿಸಿ ಆದಷ್ಟು ಬೇಗ ಚಿಕಿತ್ಸೆ ದೊರಕಿಸಿಕೊಡುವಲ್ಲಿ ಆಂಬುಲೆನ್ಸ್ ಸಿಬ್ಬಂದಿ ಅನಿವಾರ್ಯ ಪಾತ್ರ ವಹಿಸುತ್ತಾರೆ.
ದಣಿವರಿಯದ ಸೇವೆಯನ್ನು ಗುರುತಿಸಿ ಆಂಬ್ಯುಲೆನ್ಸ್‍ಗಳಿಗೆ ದಾರಿ ಮಾಡಿಕೊಡುವ ಅಗತ್ಯತೆಯ ಕುರಿತು ಸಮುದಾಯದ ಜಾಗೃತಿಯ ಭಾಗವಾಗಿ ಈ ಕಾರ್ಯಕ್ರಮವು ನಡೆಯಿತು. ತಿರುವನಂತಪುರ ಕಿಮ್ಸ್‍ಹೆಲ್ತ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ 108 ಆಂಬುಲೆನ್ಸ್‍ನ ಮೊದಲ ಮಹಿಳಾ ಚಾಲಕಿ ದೀಪಾಮೋಲ್ ಸೇರಿದಂತೆ 100 ಆಂಬ್ಯುಲೆನ್ಸ್ ಚಾಲಕರನ್ನು ಸನ್ಮಾನಿಸಲಾಯಿತು.
ತಿರುವನಂತಪುರಂ ನಗರ ಉಪ ಆಯುಕ್ತ ಅಜಿತ್ ಕುಮಾರ್ ಐಪಿಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಪ್ರಥಮ ಚಿಕಿತ್ಸೆ ನೀಡಲು ಆಂಬ್ಯುಲೆನ್ಸ್ ಚಾಲಕರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಅವರ ಸೇವೆಗೆ ಎμÉ್ಟೀ ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದರು. ಹೀರೋಗಳು ಅಗತ್ಯವಿರುವವರಿಗೆ ಸಹಾಯ ಪಡೆಯಲು ಶ್ರಮಿಸುವವರು, ಮತ್ತು ಆಂಬ್ಯುಲೆನ್ಸ್ ಚಾಲಕರು ಶಕ್ತಿಮೀರಿ ಕಾರ್ಯನಿರ್ವಹಿಸುತ್ತಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡವರನ್ನು ಸದಾ ಗೌರವಿಸುವುದು ಸಮಾಜದ ಕರ್ತವ್ಯ. ಅಪಾಯದಲ್ಲಿರುವವರನ್ನು ರಕ್ಷಿಸಲು ಪ್ರಯತ್ನಿಸುವಾಗ, ಒಬ್ಬರ ಸ್ವಂತ ಮತ್ತು ರಸ್ತೆಯಲ್ಲಿರುವ ಇತರ ಪ್ರಯಾಣಿಕರ ಪ್ರಾಣದ ಬಗ್ಗೆ ಕಾಳಜಿ ವಹಿಸಬೇಕು. ರಸ್ತೆ ನಿಯಮಗಳನ್ನು ಪಾಲಿಸುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ಕಿಮ್ಸ್‍ಹೆಲ್ತ್‍ನ ಕಾರ್ಯನಿರ್ವಾಹಕ ನಿರ್ದೇಶಕ ಇ.ಎಂ.ನಜೀಬ್ ಮಾತನಾಡಿ, ರಸ್ತೆ ನಿಯಮಗಳು ಮತ್ತು ಎಚ್ಚರಿಕೆಯ ಮೌಲ್ಯವನ್ನು ಸಮಾಜವು ಇನ್ನೂ ಅರಿತುಕೊಳ್ಳಬೇಕಾಗಿದೆ. 2022ರ ಸೆಪ್ಟೆಂಬರ್‍ವರೆಗೆ ರಾಜ್ಯದಲ್ಲಿ ಈ ವರ್ಷ 28,775 ಅಪಘಾತಗಳು ಸಂಭವಿಸಿವೆ. ಅದರಲ್ಲಿ 2,838 ಸಾವುಗಳು ವರದಿಯಾಗಿವೆ. ಸಮುದಾಯ, ಕಾನೂನು ಜಾರಿ ಮತ್ತು ಸರ್ಕಾರ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಈ ಸಂಖ್ಯೆಗಳನ್ನು ನಿಯಂತ್ರಿಸಬಹುದು. ಸಂಚಾರ ಜಾಗೃತಿ ಮತ್ತು ನಿಯಮಗಳನ್ನು ಪಾಲಿಸುವುದು ಎಷ್ಟು ಮುಖ್ಯ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.
ಕಿಮ್ಸ್ ಹೆಲ್ತ್ ಕ್ಲಿನಿಕಲ್ ಸರ್ವಿಸಸ್ ನಿರ್ದೇಶಕ ಮತ್ತು ಮೂಳೆ ಮತ್ತು ಟ್ರಾಮಾ ವಿಭಾಗದ ಮುಖ್ಯಸ್ಥ ಡಾ. ಮೊಹಮ್ಮದ್ ನಸೀರ್, ಕಿಮ್ಸ್ ಹೆಲ್ತ್ ಕ್ರಿಟಿಕಲ್ ಕೇರ್ ಸಲಹೆಗಾರ ಡಾ. ಆರ್ ಮುರಳೀಧರನ್ ಹಾಗೂ ಪ್ರಥಮ ಮಹಿಳಾ ಚಾಲಕಿ ದೀಪಾಮೋಳ್ ಮಾತನಾಡಿದರು. ಕಿಮ್ಸ್ ಹೆಲ್ತ್ ಸಿಇಒ ಜೆರ್ರಿ ಫಿಲಿಪ್ಸ್ ಉಪಸ್ಥಿತರಿದ್ದರು. ಕಿಮ್ಸ್ ಹೆಲ್ತ್ ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಕಿಮ್ಸ್ ಹೆಲ್ತ್ ವೈದ್ಯಕೀಯ ಅಧೀಕ್ಷಕ ಡಾ.ಶಮೀಮ್ ಕೆ.ಯು ಸ್ವಾಗತಿಸಿದರು. ಪ್ರವೀಣ್ ಮುರಳೀಧರನ್ ವಂದಿಸಿದರು.
ವಿಶ್ವ ಆಘಾತ ದಿನ; 108 ಆಂಬ್ಯುಲೆನ್ಸ್‍ನ ಮೊದಲ ಮಹಿಳಾ ಚಾಲಕಿ ದೀಪಾಮೋಲ್ ಸೇರಿದಂತೆ 100 ಚಾಲಕರನ್ನು ಗೌರವಿಸಿದ ಕಿಮ್ಸ್ ಹೆಲ್ತ್
0
ಅಕ್ಟೋಬರ್ 19, 2022