ಪುಣೆ: 'ನಾವು ಹೋದ ವರ್ಷದ ಡಿಸೆಂಬರ್‌ನಲ್ಲೇ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆ ಸ್ಥಗಿತಗೊಳಿಸಿದ್ದೆವು. ಆಗ ದಾಸ್ತಾನು ಇದ್ದ ಡೋಸ್‌ಗಳ ಪೈಕಿ ಸುಮಾರು 10 ಕೋಟಿ ಡೋಸ್‌ಗಳ ಅವಧಿ ಮೀರಿದೆ' ಎಂದು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆದಾರ್ ಪೂನಾವಾಲಾ ಹೇಳಿದ್ದಾರೆ.
ಡೆವಲಪಿಂಗ್ ಕಂಟ್ರೀಸ್ ವ್ಯಾಕ್ಸಿನ್ ಮ್ಯಾನುಫ್ಯಾಕ್ಚುರರ್ಸ್ ನೆಟ್‌ವರ್ಕ್‌ನ (ಡಿಸಿವಿಎಂಎನ್) ವಾರ್ಷಿಕ ಸಭೆಯಲ್ಲಿ ಗುರುವಾರ ಪಾಲ್ಗೊಂಡಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
'ಸದ್ಯದ ಪರಿಸ್ಥಿತಿಯಲ್ಲಿ ಬೂಸ್ಟರ್ ಡೋಸ್‌ಗಳಿಗೆ ಬೇಡಿಕೆಯೇ ಇಲ್ಲ. ಕೋವಿಡ್ ಹಾಗೂ ಲಸಿಕೆಗಳಿಂದ ಜನ ಸಹಜವಾಗಿಯೇ ಬೇಸತ್ತು ಹೋಗಿದ್ದಾರೆ. ಕೋವಿಡ್‌ನಿಂದ ನಾನು ಕೂಡ ಬೇಸತ್ತಿದ್ದೇನೆ' ಎಂದಿದ್ದಾರೆ.