ಮುಂಬೈ: ಕೇಂದ್ರ ಗೃಹ ಸಚಿವಾಲಯ ಭಯೋತ್ಪಾದಕರೆಂದು ಘೋಷಿಸಿರುವ 10
ಮಂದಿಯ ಬ್ಯಾಂಕ್ ಖಾತೆಗಳ ವಿವರಗಳನ್ನು ಸರ್ಕಾರಕ್ಕೆ ನೀಡುವಂತೆ ಎಲ್ಲಾ ಬ್ಯಾಂಕ್ ಹಾಗೂ
ಹಣಕಾಸು ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.
ಅ.04 ರಂದು ಗೃಹ ಸಚಿವಾಲಯ ಹಿಜ್ಬುಲ್ ಮುಜಾಹಿದ್ದೀನ್ (ಹೆಚ್ಎಂ), ಲಷ್ಕರ್-ಎ-ತೈಯ್ಬಾ
(ಎಲ್ಇಟಿ) ಹಾಗೂ ಇತರ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ 10 ಮಂದಿಯನ್ನು ಯುಎಪಿಎ
ಕಾಯ್ದೆಯಡಿ ಭಯೋತ್ಪಾದಕರೆಂದು ಘೋಷಿಸಿತ್ತು.
ಹಿಬುಬುಲ್ಲಾ ಮಲೀಕ್ ಅಲಿಯಾಸ್ ಸಾಜಿದ್ ಜುಟ್ (ಪಾಕಿಸ್ತಾನಿ ಪ್ರಜೆ) ಬಸಿತ್ ಅಹ್ಮದ್ ರೇಷಿ (ಜಮ್ಮು-ಕಾಶ್ಮೀರದ ಬಾರಾಮುಲ್ಲಾ ನಿವಾಸಿ, ಆದರೆ ಪಾಕ್ ನಲ್ಲಿ ವಾಸ) ಜಮ್ಮು-ಕಾಶ್ಮೀರದ ಇಮ್ತಿಯಾಜ್ ಅಹ್ಮದ್ ಕಂಡೂ ಅಲಿಯಾಸ್ ಸಜಾದ್, ಜಾಫರ್ ಇಕ್ಬಾಲ್ ಅಲಿಯಾಸ್ ಸಲೀಂ, ಶೇಖ್ ಜಮೀಲ್-ಉರ್-ರೆಹಮಾನ್ ಅಲಿಯಾಸ್ ಶೇಖ್ ಸಾಹಬ್ ಎಂಬುವವರನ್ನು ಭಯೋತ್ಪಾದಕರೆಂದು ಘೋಷಿಸಲಾಗಿದೆ.