ಮುಳ್ಳೇರಿಯ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪುಂಡೂರು ಕರೋಡಿ ಶ್ರೀ ಉಮಾಮಹೇಶ್ವರ ಸಂಘದ 10 ನೇ ವಾರ್ಷಿಕೋತ್ಸವ ಆಚರಿಸಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜಕ ಮುಕೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ ಸಂಘದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಅಧ್ಯಕ್ಷೆ ಸರಸ್ವತಿ ಚಂದ್ರಂಪಾರ ಅಧ್ಯಕ್ಷತೆ ವಹಿಸಿದರು. ಫೀಲ್ಡ್ ಆಫೀಸರ್ ಗೀತಾ, ಪುಷ್ಪ ಮಾತನಾಡಿದರು. ಹಿಂದು ಐಕ್ಯ ವೇದಿ ಅಧ್ಯಕ್ಷ ಬಾಲಕೃಷ್ಣನ್, ಕಾರ್ಯದರ್ಶಿ ಸುರೇಂದ್ರನ್ ಮೊದಲಾದವರು ಶುಭ ಹಾರೈಸಿದರು. ವನಿತಾ ಉದಯನ್ ವಾರ್ಷಿಕ ವರದಿ ಮಂಡಿಸಿದರು. ಸುರೇಖ ಅಶೋಕ್ ಸ್ವಾಗತಿಸಿ, ವೀಣಾ ಸುನಿಲ್ ವಂದಿಸಿದರು. ಪದಾಧಿಕಾರಿಗಳಾದ ಸರೋಜಿನಿ, ಸರಿತ, ಜಿಶ, ಬಾಲಮಣಿ, ಲಕ್ಷ್ಮಿ, ಅರುಣ, ಶ್ರೀಜ, ಸುಲೋಚನ, ರಂಜಿನಿ ಮೊದಲಾದವರು ಉಪಸ್ಥಿತರಿದ್ದರು.
ಪುಂಡೂರು ಕರೋಡಿ ಶ್ರೀ ಉಮಾಮಹೇಶ್ವರ ಸಂಘದ 10ನೇ ವಾರ್ಷಿಕೋತ್ಸವ
0
ಅಕ್ಟೋಬರ್ 05, 2022